ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆಗೊಳಿಸಿ: ಬಿಬಿಎಂಪಿ ಗುತ್ತಿಗೆದಾರರ ಒತ್ತಾಯ

bbmp
Published on

ಬೆಂಗಳೂರು: ಬಾಕಿ ಬಿಲ್‌ಗಳಿಗೆ ಹಣ ಪಾವತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ನೇತೃತ್ವದಲ್ಲಿ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.

ಪಾಲಿಕೆ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ 2023ರ ಆಗಸ್ಟ್‌ನಿಂದ 2025ರ ಜೂನ್‌ವರೆಗೆ ಅಂದರೆ 23 ತಿಂಗಳುಗಳ ಬಿಲ್‌ಗಳಿಗೆ ಹಣ ಪಾವತಿಸಬೇಕಿದೆ. 12 ತಿಂಗಳ ಜನರಲ್ ಎಲ್‌ಒಸಿ ಬಿಡುಗಡೆ ಮಾಡಬೇಕಿದೆ.1 ಕೋಟಿ ರೂ.ಮೇಲ್ಪಟ್ಟ ಕಾಮಗಾರಿಗಳಿಗೆ ಗುಣ ನಿಯಂತ್ರಣ ವಿಭಾಗದಿಂದ ಪಿಎಂಸಿ ನಿಯೋಜನೆ ಮಾಡುತ್ತಿದ್ದು, ಹಿಂದಿನ ಪದ್ಧತಿಯಂತೆ ಆಯಾ ಕಾರ್ಯಪಾಲಕ ಅಭಿಯಂತರ ಹಂತದಲ್ಲಿಯೇ ಟೆಂಡರ್ ಮೂಲಕ ಪಿಎಂಸಿ ನಿಗದಿಪಡಿಸಬೇಕೆಂದು ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದು ನಂದಕುಮಾರ್ ಹೇಳಿದರು.

ಕೆಆರ್‌ಐಡಿಎಲ್ ಸಂಸ್ಥೆಯಿಂದ 6-7 ವರ್ಷಗಳ ಹಿಂದೆ ನಡೆಸಲಾಗಿರುವ ಕಾಮಗಾರಿಗಳಿಗೆ ತಡೆಹಿಡಿಯಲಾಗಿರುವ ಶೇ.25 ಬಾಕಿ ಬಿಲ್‌ನ ಮೊತ್ತ ಬಿಡಗಡೆ ಮಾಡಬೇಕು. ವಾರ್ಡ್ ವ್ಯಾಪ್ತಿಯ ಕಾಮಗಾರಿಗಳನ್ನು ವಿಭಾಗ ಮಟ್ಟದಲ್ಲಿ ಒಟ್ಟುಗೂಡಿಸಿ ಪ್ಯಾಕೇಜ್ ಮಾಡಿ ಟೆಂಡರ್ ಆಹ್ವಾನಿಸುತ್ತಿರುವ ಕಾರಣ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಪ್ಯಾಕೇಜ್ ಪದ್ಧತಿ ರದ್ದುಪಡಿಸಬೇಕು. ಬಾಕಿ ಇರುವ ಭದ್ರತಾ ಠೇವಣಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net