ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘ

nanda kumar
Published on

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದ ಎಲ್ಲ ಪದಾಧಿಕಾರಿಗಳ ಒತ್ತಾಯದ ಮೇರೆಗೆ ದಸರಾ ಹಬ್ಬದ ಪ್ರಯುಕ್ತ ಡಿಸಿಎಂ ಡಿ.ಕೆ.ಶಿವಕುಮಾರ್​ ಅದೇಶ ಮೇರೆಗೆ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಿಲ್​ ಪಾವತಿಗೆ ಬಿಬಿಎಂಪಿ 154 ಕೋಟಿ ರೂ.ಬಿಡುಗಡೆ ಮಾಡಿದೆ.

ಕೇಂದ್ರ ವಿಭಾಗಕ್ಕೆ 7.48 ಕೋಟಿ ರೂ., ಪೂರ್ವ ವಿಭಾಗಕ್ಕೆ 14.59 ಕೋಟಿ ರೂ., ಪಶ್ಚಿಮ ವಿಭಾಗಕ್ಕೆ 29.17 ಕೋಟಿ ರೂ., ದಕ್ಷಿಣಕ್ಕೆ 18.18 ಕೋಟಿ ರೂ., ರಾಜರಾಜೇಶ್ವರಿ ನಗರಕ್ಕೆ 31.52 ಕೋಟಿ ರೂ., ಬೊಮ್ಮನಹಳ್ಳಿ ವಿಭಾಗಕ್ಕೆ 19.92 ಕೋಟಿ ರೂ., ದಾಸರಹಳ್ಳಿ ವಿಭಾಗಕ್ಕೆ 5.81 ಕೋಟಿ ರೂ., ಯಲಹಂಕಕ್ಕೆ 8.31 ಕೋಟಿ ರೂ., ಮಹದೇವಪುರಕ್ಕೆ 19.12 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

2023ರ ಜನವರಿಂದ 2023ರ ಮಾರ್ಚ್​ವರೆಗಿನ ಕಾಮಗಾರಿಗಳ ಬಿಲ್​ಗಳಿಗೆ ಹಣ ಪಾವತಿಸಲು ಪಾಲಿಕೆ ಮುಖ್ಯ ಆಯುಕ್ತರು ಒಪ್ಪಿ ಬಿಡುಗಡೆ ಮಾಡಿರುವ ಅನುದಾನವನ್ನು ಎಲ್ಲ ವಯಲಗಳ ಮುಖ್ಯ ಅಭಿಯಂತರ ಖಾತೆಗೆ ಜಮೆ ಮಾಡಿದ್ದಾರೆ. ಅದಷ್ಟೂ ಬೇಗ ಈ ಹಣವನ್ನು ಗುತ್ತಿಗೆದಾರರಿಗೆ ಪಾವತಿಸುವಂತೆ ಸೂಚಿಸಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್​ ಹೇಳಿದ್ದಾರೆ. ಬಾಕಿ ಬಿಲ್​ಗಳಿಗೆ ಹಣ ಮಾಡಿದ್ದ ಸರ್ಕಾರಕ್ಕೆ, ಬಿಬಿಎಂಪಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

750 ಕೋಟಿ ಬಿಡುಗಡೆ: ಕಾಮಗಾರಿಗಳಳನ್ನು ನಡೆಸಲು ಒಪ್ಪಿರುವ ಸರ್ಕಾರವು,ಬಿಬಿಎಂಪಿಗೆ 2ನೇ ಕಂತಿನಲ್ಲಿ 750 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಅನುದಾನವನ್ನು ವಿಶೇಷ ಮೂಲಭೂತ ಸೌಕರ್ಯ ಬಂಡವಾಳಕ್ಕೆ ಬೆಂಬಲ ಯೋಜನೆಯಡಿಯ ಕಾಮಗಾರಿಗಳಿಗೆ ಬಳಸಬೇಕು. ಸರ್ಕಾರ ಅನುಮೋದನೆ ನೀಡಿರುವ ಕ್ರಿಯಾಯೋಜನೆ ಕಾಮಗಾರಿಗಳಿಗೆ ಹೊರತುಪಡಿಸಿ ಬೇರೆ ಕಾಮಕಾರಿಗಳಿಗೆ/ಉದ್ದೇಶಕ್ಕೆ ಹಣ ಬಳಕೆ ಮಾಡಿದ್ದಲ್ಲಿ ಸಂಬಂಧಪಟ್ಟ ಮುಖ್ಯ ಲೆಕ್ಕಾಧಿಕಾರಿಗಳನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು. ಅನುದಾನದ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ನಡೆಯುವ ಎಂಪಿಕ್​ ಸಭೆಗೆ ಪ್ರಗತಿ ವರದಿ ಸಲ್ಲಿಸಬೇಕು. ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು, ಸ್ವೀಕರ್ಥನ ರಶೀದಿ ಮೂಲಕ ರಾಜ್ಯ ಹುಜೂರ್​ ಖಜಾನೆಯಿಂದ ಡ್ರಾ ಮಾಡಿ ಮುಖ್ಯ ಆಯುಕ್ತರಿಗೆ ಇ&ಪೇಮೆಂಟ್​ ಮೂಲಕ ನೀಡಲು ಅಧಿಕಾರವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net