ಲಂಡನ್ ಮಾದರಿ ವಾರ್ಡ್ ವಿಗಂಡಣೆ ಇಲ್ಲ: ತುಷಾರ್ ಗಿರಿನಾಥ್

tushar girinath
Published on

ಬೆಂಗಳೂರು: ರಾಜಧಾನಿಯಲ್ಲಿ ಕಂದಾಯ ಇಲಾಖೆಗೆ ಸೇರಿದ ಕಾಲುವೆ, ಕೆರೆಗಳನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡರೆ ತಹಸೀಲ್ದಾರ್ ಆದೇಶ ಮೇರೆಗೆ ಭೂ ಕಂದಾಯ ಕಾಯ್ದೆಯಡಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮಳೆ ನೀರು ಸುಗಮವಾಗಿ ಹರಿಯುವುದಕ್ಕೆ ತೊಂದರೆಯಾದರೆ ವಿಪತ್ತು ನಿರ್ವಹಣೆ ಕಾಯ್ದೆ ಬಳಸಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗುವುದು. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಒತ್ತುವರಿಗೆ ತುಸು ಅಡಚಣೆಯಾಗಿದೆ. ಯಲಹಂಕ, ದಾಸರಹಳ್ಳಿ, ಪೂರ್ವ ಹಾಗೂ ಮಹದೇವಪುರ ವಲಯ ಸೇರಿ ನಗರದಲ್ಲಿ ಇನ್ನೂ 115 ಕಡೆ ಒತ್ತುವರಿ ತೆರವು ಮಾಡಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ಧಾರೆ.

Tushar Girinath

ಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ಬಿಬಿಎಂಪಿ ವಾರ್ಡ್ ಮರು ವಿಗಂಡಣೆಗೆ ಆದೇಶ ಹೊರಡಿಸಿದೆ. ನನ್ನ ನೇತೃತ್ವದಲ್ಲಿ ಪಾಲಿಕೆ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗ ರಚಿಸಲಾಗಿದೆ. ನಿಯಮ ಪಾಲಿಸಿ ವಾರ್ಡ್ ಮರು ವಿಗಂಡಣೆ ಮಾಡಲಾಗುವುದು. ಲಂಡನ್ ಮಾದರಿಯಲ್ಲಿ ವಾರ್ಡ್ ವಿಂಗಡಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮತದಾನ ಮಾಡುತ್ತಾರೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿವರಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net