

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿರುವ/ಅಪಾಯ ಸ್ಥಿತಿಯ ಮರಗಳು ಹಾಗೂ ಒಣಗಿರುವ ರೆಂಬೆ-ಕೊಂಬೆಗಳಿದ್ದಲ್ಲಿ ಸಾರ್ವಜನಿಕರು ಅವುಗಳ ಮಾಹಿತಿಯನ್ನು ಪಾಲಿಕೆಯ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಿ ದೂರು ನೀಡಬಹುದು. ಇದಕ್ಕಾಗಿ ಪಾಲಿಕೆಯ ಎಂಟೂ ವಲಯಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಅರಣ್ಯ ಇಲಾಖೆಯ ಅಧಿಕಾರಿಗಳಿಗಳಿಗೆ ದೂರವಾಣಿ ಮೂಲಕ (ವಾಟ್ಸ್‌ಅಪ್ ಮೂಲಕ ಫೋಟೋ, ಸ್ಥಳದ ವಿವರದೊಂದಿಗೆ) ಮಾಹಿತಿ ನೀಡಬಹುದಾಗಿದೆ.
ನಾಗರಿಕರು ನೀಡುವ ಮಾಹಿತಿ ಆಧರಿಸಿ ಅವುಗಳನ್ನು ಸ್ಥಳಪರಿಶೀಲನೆ ನಡೆಸಿ ಅಪಾಯಕಾರಿ ಆಗಿದ್ದಲ್ಲಿ ತೆರವುಗೊಳಿಸಲಾಗುವುದು ಎಂದು ಪಾಲಿಕೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಅಧಿಕಾರಿಗಳ ದೂರವಾಣಿ ಸಂಖ್ಯೆ:
ಪಶ್ಚಿಮ ವಲಯ:
ರಾಜಾಜಿನಗರ, ಗೋವಿಂದರಾಜನಗರ, ಮಲ್ಲೇಶ್ವರ - ಸುದರ್ಶನ್ (9480683341).
ಮಹಾಲಕ್ಷ್ಮೀಪುರ, ಗಾಂಧಿನಗರ, ಚಾಮರಾಜಪೇಟೆ - ರಾಜೇಶ್ (9449175978)
ಪೂರ್ವ ವಲಯ:
ಶಾಂತಿನಗರ, ಸಿ.ವಿ. ರಾಮನ್‌ನಗರ, ಸರ್ವಜ್ಞ ನಗರ - ತಿಮ್ಮಪ್ಪ (9380090027)
ಶಿವಾಜಿನಗರ, ಪುಲಿಕೇಶಿನಗರ, ಹೆಬ್ಬಾಳ - ಪಿ.ನಾಗೇಂದ್ರ (9113530344)
ದಕ್ಷಿಣ ವಲಯ:
ದಕ್ಷಿಣ ವಲಯಕ್ಕೆ - ವಿ.ಚಂದ್ರಪ್ಪ (9480683655)
ಬಸವನಗುಡಿ, ವಿಜಯನಗರ, ಪದ್ಮನಾಭನಗರ - ಶಿವಣ್ಣ (9164597895)
ಚಿಕ್ಕಪೇಟೆ, ಜಯನಗರ - ಬಿ.ಬಿ. ಮೇಟಿ (9740576919)
ಬಿ.ಟಿ.ಎಂ.ಲೇಔಟ್ - ಎಚ್.ಆರ್.ಹರೀಶ್ (7676165253)
ದಾಸರಹಳ್ಳಿ ವಲಯ:
ದಾಸರಹಳ್ಳಿ ವಲಯದ ಇಡೀ ಪ್ರದೇಶಕ್ಕೆ - ಕೆ.ಎನ್. ರಾಜಪ್ಪ (9448234928)
ಬೊಮ್ಮನಹಳ್ಳಿ ವಲಯ:
ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ - ನರೇಂದ್ರಬಾಬು (9480685399)
ಬೊಮ್ಮನಹಳ್ಳಿ, ಆನೇಕಲ್ - ವಿನಯ್ (7760933913)
ಯಲಹಂಕ ವಲಯ:
ಯಲಹಂಕ - ದೇವರಾಜ್ (9964530649)
ಬ್ಯಾಟರಾಯನಪುರ - ಮುತ್ತುರಾಜ್ (9483139438)
ಆರ್.ಆರ್.ನಗರ ವಲಯ:
ಆರ್.ಆರ್.ನಗರ - ರವೀಂದ್ರನಾಥ್ (6361903330)
ಯಶವಂತಪುರ - ವಿ.ಜಗದೀಶ್ (9880516322)
ಮಹದೇವಪುರ ವಲಯ:
ಮಹದೇವಪುರ, ಕೆ.ಆರ್.ಪುರ - ಚಿದಾನಂದ್ (9480685541)