ಬಿದನಗೆರೆಯಲ್ಲಿ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ; ಏಳು ವರ್ಷದ ನಂತರ ಕಾಮಗಾರಿ ಪೂರ್ಣ

20kunigal1
Published on

ಕುಣಿಗಲ್ : ವಿಶ್ವದಲ್ಲೇ ಪ್ರಥಮ ಎನ್ನಲಾದ 161 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಬಿದನಗೆರೆಯ ಬಸವೇಶ್ವರ ಮಠದಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ.

ಪಟ್ಟಣದ ಹೊರವಲಯದ ಬಿದನಗೆರೆ ಸತ್ಯಶನೇಶ್ವರ, ಉದ್ಭವ ಬಸವಣ್ಣ, ಶನಿಶಿಂಗಣಾಪುರ ತ್ರಿಮೂರ್ತಿ ಸಂಗಮ ಕ್ಷೇತ್ರ ಶ್ರೀಬಸವೇಶ್ವರ ಮಠದ ಧರ್ಮಾಧಿಕಾರಿ ಡಾ.ಧನಂಜಯ್ಯ ಗುರೂಜಿ ನೇತತ್ವದಲ್ಲಿ ನಿರ್ಮಾಣಗೊಂಡಿರುವ ಪಂಚಮುಖಿ ಆಂಜನೇಯ ಸ್ವಾಮಿ ವಿಗ್ರಹ ಕಾಮಗಾರಿ ಪೂರ್ಣಗೊಂಡಿದ್ದು 2022ರ ೆ.28ರಂದು ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ತಮಿಳುನಾಡಿನ ಮಾರಿಮುತ್ತು ಅವರಿಗೆ ಪಂಚಮುಖಿ ಆಂಜನೇಯ ಸ್ವಾಮಿ ವಿಗ್ರಹ ನಿರ್ಮಾಣದ ಹೊಣೆಯನ್ನು ವಹಿಸಿಕೊಡಲಾಗಿದ್ದು, 50 ಕಾರ್ಮಿಕರ ತಂಡದೊಂದಿಗೆ 2014ರಲ್ಲಿ ಅವರು ಕೆಲಸ ಪ್ರಾರಂಭಿಸಿದರು. ಸತತ 7 ವರ್ಷಗಳ ಶ್ರಮದಿಂದ ವರ್ಷಾಂತ್ಯಕ್ಕೆ ಪೂರ್ಣಗೊಳಿಸಿದ್ದಾರೆ. ವಿಗ್ರಹಕ್ಕೆ ಸ್ಟೀಲ್ ಪ್ರೇಮಿಂಗ್, ಬಲವರ್ಧನೆಯ ಸಿಮೆಂಟ್ ಕಾಂಕ್ರಿಟ್ ಬಳಸಲಾಗಿದೆ, ಈ ವಿಗ್ರಹವನ್ನು ಪ್ರಕತಿ ಸೌದರ್ಯದ ಮಡಿಲಲ್ಲಿ ಸ್ಥಾಪನೆ ಮಾಡಿರುವುದು ವಿಶೇಷವಾಗಿದೆ,

ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಉದ್ಘಾಟನೆಗೂ ಮುನ್ನವೇ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ನಿತ್ಯ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಶ್ರೀ ಕ್ಷೇತ್ರದ ಹಿನ್ನೆಲೆ : 20 ವರ್ಷಗಳ ಹಿಂದೆ ಡಾ.ಧನಂಜಯ್ಯ ಗುರೂಜಿ ಸಣ್ಣ ಗುಡಿಸಲಲ್ಲಿ ಸತ್ಯ ಶನೇಶ್ವರಸ್ವಾಮಿ ಪ್ರತಿಷ್ಠಾಪಿಸಿದರು, ಬಳಿಕ ಉದ್ಭವ ಬಸವಣ್ಣ, ಶನಿಶಿಂಗಣಾಪುರ ವಿಗ್ರಹ ಪ್ರತಿಷ್ಠಾಪಿಸಿ, ಪೂಜಿಸುತ್ತಾರೆ.

ಭಕ್ತರಿಂದ ಬಂದ ಕಾಣಿಕೆಯಿಂದ ಶ್ರೀಕ್ಷೇತ್ರವು ಕೇವಲ 20 ವರ್ಷದ ಅವಧಿಯಲ್ಲಿ ಬಹತ್ ಆಗಿ ಬೆಳೆದಿದೆ, ಈಗ ಶ್ರೀ ಕ್ಷೇತ್ರಕ್ಕೆ ಪಂಚಮುಖಿ ಆಂಜನೇಯಸ್ವಾಮಿ ಹೊಸದಾಗಿ ಸೇರ್ಪಡೆಗೊಂಡಿದೆ,

ಸಾಮಾಜಿಕ ಕಾರ್ಯಗಳು ; ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳ ಜತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳೂ ನಡೆಯುತ್ತಿವೆ, ಉಚಿತ ಸರಳ ವಿವಾಹ, ಅಂಗವಿಕಲರು, ವದ್ದರು, ವಿಧವೆಯರಿಗೆ ಮಾಸಾಶನ, ಉಚಿತ ಆರೋಗ್ಯ ಶಿಬಿರ, ವಸತಿ ರಹಿತಿ ಬಡವರಿಗೆ ಮನೆ ನಿರ್ಮಾಣಕ್ಕೆ ಧನ ಸಹಾಯ, ರೈತರಿಗೆ ಕಷಿ ಪರಿಕರ ವಿತರಣೆ, ಬಡ ಮಕ್ಕಳನ್ನು ದತ್ತು ಪಡೆದು ಶಿಕ್ಷಣ, ಅನಾಥಾಶ್ರಮ, ವದ್ದಾಶ್ರಮ, ದಾಸೋಹ, ವಸತಿ ಸೌಲಭ್ಯ ಸೇರಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಡಾ.ಧನಂಜಯ್ಯ ಗುರೂಜಿ ನೇತತ್ವದಲ್ಲಿ ನಡೆಯುತ್ತಿವೆ.

ಆಂಜನೇಯಸ್ವಾಮಿ ವಿಗ್ರಹ ನಿರ್ಮಾಣ ಕೆಲಸ ಮುಗಿದಿದ್ದು, 2022ರ ೆ 28 ರಂದು ಉದ್ಘಾಟಿಸಲು ಉದ್ದೇಶಿಸಲಾಗಿದೆ. ಈ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ರಾಜ್ಯ, ರಾಷ್ಟ್ರದ ಪ್ರಮುಖ ಗಣ್ಯರು, ಅಧಿಕಾರಿಗಳು ಆಗಮಿಸಲಿದ್ದಾರೆ. ಡಾ.ಧನಂಜಯ್ಯ ಗುರೂಜಿ ಧರ್ಮದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net