ಬಾಡಿದೆ ಹೂ ಬೆಳೆಗಾರರ ಬದುಕು, ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ, 800 ಹೆಕ್ಟೇರ್ ಬೆಳೆ ಬಿಕರಿಯಾಗಿಲ್ಲ

27Rural1
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ಲಾಕ್‌ಡೌನ್‌ನಿಂದಾಗಿ ಹೂವು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದ್ದು, ಬೆಳೆಗಾರರ ಬದುಕು ಅತಂತ್ರವಾಗಿದೆ. ಶುಭ ಸಮಾರಂಭ ಹೆಚ್ಚಾಗಿ ನಡೆಯುವ ಸಮಯದಲ್ಲೇ ಹೀಗಾಗಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಆಂಧ್ರ ಪ್ರದೇಶದಲ್ಲಿ ಜರ್ಬೆರಾ ಹೂವಿಗೆ ಬೇಡಿಕೆ ಇದ್ದು ಬಹುತೇಕ ರೈತರು ಅಲ್ಲಿನ ಮಾರುಕಟ್ಟೆಗೆ ಕಳಿಸುತ್ತಿದ್ದರು. ಆದರೆ ಈಗ ಎಲ್ಲವೂ ಸ್ತಬ್ಧಗೊಂಡಿದೆ.

ತೂಬಗೆರೆ, ಸಾಸಲು ಹೋಬಳಿಯ ಪಾಲಿಹೌಸ್‌ನಲ್ಲಿ 800 ಹೆಕ್ಟೇರ್‌ಗಿಂತ ಹೆಚ್ಚು ಹಾಗೂ ಮಧುರೆ ಹೋಬಳಿಯ ಹಲವೆಡೆ ಗುಲಾಬಿ, ಜರ್ಬೆರಾ, ಸೇವಂತಿಗೆ, ಕಾಕಡ, ಚಾಂದಿನಿ, ಮಲ್ಲಿಗೆ, ಚೆಂಡು ಹೂವು ಉತ್ತಮ ಇಳುವರಿ ಬಂದಿದ್ದರೂ ಬಿಕರಿಯಾಗದೆ ರೈತರು ನಷ್ಟ ಎದುರಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net