`ಬಯಲಾಟಗಳು: ಹೊಸ ಸಾಧ್ಯತೆಗಳು' ಚಿಂತನ- ಮಂಥನ

6 Dwd 5 Dr. K.R.Durgadas
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿಯು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಜು. 8ರಿಂದ 10ರವರೆಗೆ ಕವಿವ ಸಂಘದಲ್ಲಿ `ಬಯಲಾಟಗಳು: ಹೊಸ ಸಾಧ್ಯತೆಗಳು' ಶೀರ್ಷಿಕೆಯಡಿ ಚಿಂತನ- ಮಂಥನ ಕಾರ್ಯಕ್ರಮ ಏರ್ಪಡಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8ರಂದು ಬೆಳಗ್ಗೆ 10.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 12.30ಕ್ಕೆ ದೊಡ್ಡಾಟ ಹಾಡುಗಾರಿಕೆ ನಡೆಯಲಿದೆ. 2.30ಕ್ಕೆ ಬಯಲಾಟ ಪಠ್ಯಗಳು: ಪರಿಷ್ಕರಣೆ ಮತ್ತು ಕಾಲಮಿತಿ ಗೋಷ್ಠಿ, ನಡೆಯಲಿದೆ. ಸಂಜೆ 4ಕ್ಕೆ ದ್ರೌಪದಿ ವಸ್ತಾçಪಹರಣ, 5.30ಕ್ಕೆ ವೀರ ಅಭಿಮನ್ಯು ಕಾಳಗ, 7ಕ್ಕೆ ಶ್ರೀಕೃಷ್ಣ ಪಾರಿಜಾತ ಬಯಲಾಟಗಳು ಪ್ರದರ್ಶನಗೊಳ್ಳಲಿವೆ ಎಂದರು.

9ರAದು ಬೆಳಗ್ಗೆ 10ಕ್ಕೆ ದೊಡ್ಡಾಟ ಹಾಡುಗಾರಿಕೆ, 11ಕ್ಕೆ ಸಂಗ್ಯಾ ಬಾಳ್ಯಾ: ಪರಿಷ್ಕರಣೆ ಮತ್ತು ಆಶಯ ಗೋಷ್ಠಿ, ಮಧ್ಯಾಹ್ನ 12.30ಕ್ಕೆ ಶ್ರೀಕೃಷ್ಣ ಪಾರಿಜಾತ: ಪುರಾಣ ಮತ್ತು ವಾಸ್ತವ ವಿಷಯದ ಕುರಿತ ಗೋಷ್ಠಿ, ಮಧ್ಯಾಹ್ನ 2.30ಕ್ಕೆ ಬಯಲಾಟ ರಂಗ ತಂತ್ರ: ಹೊಸ ಸಾಧ್ಯತೆಗಳು ಗೋಷ್ಠಿ, ಸಂಜೆ 4ಕ್ಕೆ ಸೂತ್ರದ ಗೊಂಬೆಯಾಟ: ಮಹಾಭಾರತ ಪ್ರಸಂಗ- ಏಕಲವ್ಯ, 5.30ಕ್ಕೆ ಮೂಡಲಪಾಯ ಬಯಲಾಟ- ಕರ್ಣಾರ್ಜುನ ಕಾಳಗ, 7ಕ್ಕೆ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

10ರ0ದು ಬೆಳಗ್ಗೆ 10ಕ್ಕೆ ಬಾಲಲೀಲಾ ದೊಡ್ಡಾಟ ಕಲಾಸಂಘದಿ0ದ ಹಾಡುಗಾರಿಕೆ, 11ಕ್ಕೆ ಬಯಲಾಟದ ಸಂಗೀತ ಮತ್ತು ವೇಷಭೂಷಣ ಪ್ರಸ್ತುತಿ ಇರಲಿದೆ. ನಂತರ ಜರುಗುವ ಸಮಾರೋಪ ಸಮಾರಂಭದಲ್ಲಿ ವೆಂಕಟೇಶ ಮಾಚಕನೂರ ಸಮಾರೋಪ ಭಾಷಣ ಮಾಡುವರು. ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಜೆ 4ಕ್ಕೆ ಭೀಮಾರ್ಜುನರ ಕಾಳಗ, 5.30ಕ್ಕೆ ಹೇಮರಡ್ಡಿ ಮಲ್ಲಮ್ಮ ಹಾಗೂ 7ಕ್ಕೆ ಸಂಗ್ಯಾ ಬಾಳ್ಯಾ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net