ಬಯಲಲ್ಲಿ ಶೌಚ ಮಾಡಿದವರಿಗೆ ಸನ್ಮಾನ!, ಶೌಚಗೃಹ ಬಳಕೆ ಜಾಗೃತಿಗೆ ಅಧಿಕಾರಿಗಳ ಹೊಸ ಅಸ

08ank news and photos 02
Published on

ಆನೇಕಲ್: ಸರ್ಕಾರದ ನೆರವಿನೊಂದಿಗೆ ಶೌಚಗೃಹ ನಿರ್ಮಿಸಿಕೊಂಡಿದ್ದರೂ, ಬಯಲಲ್ಲಿ ಮಲ ವಿಸರ್ಜನೆ ಮುಂದುವರಿಸಿದ್ದ ರಾಗಿಹಳ್ಳಿ ಗ್ರಾಪಂನ ಅಣ್ಣಯ್ಯನದೊಡ್ಡಿ ಗ್ರಾಮಸ್ಥರಿಗೆ ತಾಪಂನಿಂದ ಸನ್ಮಾನ ಮಾಡಲಾಯಿತು.

ಶೌಚಗೃಹ ಬಳಸುತ್ತಿಲ್ಲವೆಂಬ ಸುದ್ದಿ ತಿಳಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ದೇವರಾಜೇಗೌಡ, ಗ್ರಾಪಂ ಪಿಡಿಒ ಮಂಜಮ್ಮ ಬುಧವಾರ ಬೆಳಗ್ಗೆ 6 ಗಂಟೆಗೆ ಅಣ್ಣಯ್ಯನದೊಡ್ಡಿಗೆ ತೆರಳಿ ಗ್ರಾಮ ಸುತ್ತಿದಾಗ ಹಲವರು ಕೆರೆ, ಬೇಲಿ ಸಾಲು ಮತ್ತು ಹೊಲಗಳ ಕಡೆಗೆ ಹೋಗಿ ಬರುತ್ತಿರುವುದು ಕಂಡುಬಂತು. ಅವರನ್ನು ತಡೆದು ಹೂಮಾಲೆ ಹಾಕಿ ಸನ್ಮಾನಿಸಿದ ಅಧಿಕಾರಿಗಳು ಇನ್ಮುಂದೆ ಹಾಗೆ ಮಾಡದೆ, ಮನೆಯಲ್ಲಿರುವ ಶೌಚಗೃಹಗಳನ್ನು ಬಳಸುವಂತೆ ಮನವಿ ಮಾಡಿದರು.

ಮನೆಯಲ್ಲಿ ಶೌಚಗೃಹವಿದೆ. ಆದರೆ, ಬಯಲಲ್ಲೇ ಬಹಿರ್ದೆಸೆ ಮಾಡುವ ರೂಢಿ ನಮ್ಮದು ಎಂದು ಗ್ರಾಮದ ಹಲವರು ತಿಳಿಸಿದರು. ಆದರೆ, ಇದು ಕೆಟ್ಟ ಅಭ್ಯಾಸ. ಇದನ್ನು ಬದಲಿಸಿಕೊಂಡು ಶೌಚಗೃಹ ಬಳಸುವಂತೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net