ಬತ್ತಿಕೊಪ್ಪ ಮಹೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ 21ರಿಂದ

Shree Maheshwar Devaru
Published on

ರಟ್ಟಿಹಳ್ಳಿ: ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೋತ್ಸವ ಅಂಗವಾಗಿ ಡಿ. 21ರಿಂದ 26ರವರೆಗೆ ಕಾರ್ತಿಕೋತ್ಸವ, ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

21ರಂದು ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ ಜರುಗಲಿದೆ. 23 ರಂದು ಉಜ್ಜಯನಿ ಜಗದ್ಗುರು ಶ್ರೀ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಮಾಗಡಿ ಶ್ರೀಗಳ ಸಮ್ಮುಖದಲ್ಲಿ ವೇ.ಮೂ. ಕೊಟ್ರಯ್ಯಶಾಸ್ತ್ರಿ ಎಂ. ಮಠದ ವೈದಿಕತ್ವದೊಂದಿಗೆ ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹ ಜರುಗಲಿದೆ. ರಾತ್ರಿ 7.30ಕ್ಕೆ ಕಾರ್ತಿಕೋತ್ಸವ ನೆರವೇರುವುದು.

24ರಂದು ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಗುಗ್ಗಳ ಮಹೋತ್ಸವ ಜರುಗಲಿದೆ. ರಾತ್ರಿ 7.30ಕ್ಕೆ ಶ್ರೀ ಸ್ವಾಮಿ ವಿವೇಕಾನಂದ ಮಂಡಳಿ ಅವರಿಂದ ಪ್ರತಿಭಾ ಪುರಸ್ಕಾರ, ಧಾತ್ರಿ ರಂಗ ಸಂಸ್ಥೆ ಸಿರಿಗೆರಿ ಬಳ್ಳಾರಿ ಜಿಲ್ಲೆ ಇವರಿಂದ ಕಿರುನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

25ರಂದು ಮಧ್ಯಾಹ್ನ ಅನ್ನಸಂತರ್ಪಣೆ, ಎತ್ತುಗಳ ಮೆರವಣಿಗೆ ನಂತರ ಸಂಜೆ ಶ್ರೀ ಸ್ವಾಮಿಯ ಪುರ ಪ್ರವೇಶ ಮಾಡಲಾಗುವುದು.

ಡಿ. 26ಕ್ಕೆ ದೀಡ್ ನಮಸ್ಕಾರ, ಅನ್ನಸಂತರ್ಪಣೆ ಮತ್ತು ಎತ್ತುಗಳ ಮೆರವಣಿಗೆ ಮಾಡಲಾಗುವುದು ಎಂದು ರೈತ ಮುಖಂಡ ಕುಮಾರ ಬಳಿಗಾರ, ಎಂ.ಎಂ. ಬಣಕಾರ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net