ಬ್ಯಾಟರಿ ಕದ್ದವರ ಬಂಧನ

kumta crime
Published on

ಕುಮಟಾ: ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆ ಕಂಪನಿಯ ಲಾರಿಗಳಿಂದ ಬ್ಯಾಟರಿ ಕದ್ದಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿದ್ದಾರೆ.

ಕತಗಾಲದ ಕಪ್ಪೆಗುಳಿ ನಿವಾಸಿಗಳಾದ ಪ್ರಸಾದ ನಾಗರಾಜ ಮುಕ್ರಿ(24) ಮತ್ತು ಮಣಿಕಂಠ ತಿಮ್ಮಪ್ಪ ಮುಕ್ರಿ(24) ಬಂಧಿತ ಆರೋಪಿಗಳು.

ಕುಮಟಾ-ಶಿರಸಿ ರಸ್ತೆ ಕಾಮಗಾರಿ ನಡೆಸುತ್ತಿರುವ ಆರ್‌ಎನ್‌ಎಸ್ ಕಂಪನಿಯ ಎರಡು ಲಾರಿಗಳಲ್ಲಿನ 4 ಬ್ಯಾಟರಿಗಳು ಜು.24ರಂದು ಕಳವಾಗಿದ್ದವು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳು ಕದ್ದ 4 ಬ್ಯಾಟರಿ, ಕಳವಿಗೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.

ಪಿಎಸ್‌ಐ ನವೀನ ನಾಯ್ಕ, ಪಿಎಸ್‌ಐ ಪದ್ಮಾದೇವಳಿ ನೇತೃತ್ವದಲ್ಲಿ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net