

ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಬೆಂಗಳೂರಿನ ಧ್ರುವ್ ಕಂಪ್ಯುಸಾಫ್ಟ್ ಕನ್ಸಲ್ಟೆನಿ ್ಸ ಸಿಎಸ್‌ಆರ್ ನಿಧಿಯಲ್ಲಿ ನೀಡಿದ 4,98,750 ರೂ. ದೇಣಿಗೆಯಿಂದ ಖರೀದಿಸಿದ 11 ಆಸನಗಳ ಒಂದು ಬ್ಯಾಟರಿ ಚಾಲಿತ ವಾಹನವನ್ನು ಪ್ರವಾಸಿಗರ ಸೇವೆಗೆ ಮುಕ್ತಗೊಳಿಸಲಾಯಿತು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ ಕುಲಕರ್ಣಿ, ಧ್ರುವ್ ಕಂಪ್ಯುಸಾಫ್ಟ್ ಕನ್ಸಲ್ಟೆನಿ ್ಸ ನಿರ್ದೇಶಕರಾದ ಎಂ.ಎಸ್. ಸುಬ ್ರಹ್ಮಣ್ಯ, ಸುನಿಲ್ ಪಿ. ನಾಯ್ಕ, ಎಂ.ಇ.ಅನಿಲ್, ಡಾ.ಲತಾ ಸುಧೀರ್, ಸಿಬ್ಬಂದಿ ಇದ್ದರು.