

ಹಾವೇರಿ: ವರದಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೋಳೂರ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಬಸವರಜ ಮಲ್ಲಿಕಾರ್ಜುನ ತೋಟದ (47) ಮೃತ ವ್ಯಕ್ತಿ.
ಈತ ಕೋಳೂರ ಗ್ರಾಮದ ಮನೆ ದೇವರಾದ ಬಸವಣ್ಣ ದೇವರ ದರ್ಶನಕ್ಕೆ ಬಂದಾಗ ಸ್ನಾನ ಮಾಡುವ ಸಲುವಾಗಿ ನದಿಗೆ ಇಳಿದಿದ್ದಾನೆ. ಈ ಕುರಿತು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.