ಬರಹಗಳಲ್ಲಿ ಇರಲಿ ವಚನ ಸಾಹಿತ್ಯದ ಆಶಯ: ಕೃಷ್ಣಮೂರ್ತಿ ಕುಲಕರ್ಣಿ

Mng_Chutuku sahithya
Published on

ಬಂಟ್ವಾಳ: ವಚನ ಸಾಹಿತ್ಯದ ಮೂಲ ಆಶಯಗಳು ಎಲ್ಲ ಬರಹಗಳಲ್ಲೂ ಅಡಕವಾಗಬೇಕು, ಅಂತಹ ಸಾಹಿತ್ಯ ನಿಜಾರ್ಥದಲ್ಲಿ ಗೆಲ್ಲುತ್ತದೆ ಎಂದು ಹುಬ್ಬಳ್ಳಿಯ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಸಭಾಂಗಣದಲ್ಲಿ ಭಾನುವಾರ ನಡೆದ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಪತ್ರಕರ್ತ ಜಯಾನಂದ ಪೆರಾಜೆ ಮಾತನಾಡಿ, ಕ್ಷಣಮಾತ್ರದಲ್ಲಿ ಹುಟ್ಟಿ ಮರೆಯಾಗುವ ವಿಶೇಷ ಗುಣವುಳ್ಳ ಚುಟುಕು ಆಧುನಿಕ ಜನಪದ ಎಂದು ವ್ಯಾಖ್ಯಾನಿಸಿದರು. ನೇತ್ರಾವತಿ ಸೀನಿಯರ್ ಚೇಂಬರ್ಸ್ ಅಧ್ಯಕ್ಷ ಆದಿರಾಜ ಜೈನ್, ಜಿಲ್ಲಾ ಕಾರ್ಯದರ್ಶಿ ಶಾಂತಾ ಪುತ್ತೂರು ಮಾತನಾಡಿದರು. ಹಿರಿಯ ಚುಟುಕು ಸಾಹಿತಿ ಮೊಗರ್ನಾಡು ಜನಾರ್ದನ ವಾಸುದೇವ ಭಟ್‌ಗೆ ಕರ್ನಾಟಕ ಚುಟುಕು ರತ್ನ ಪ್ರಶಸ್ತಿ ಪ್ರದಾನಿಸಲಾಯಿತು.

ರಾಜ್ಯ ಘಟಕದ ಪದಾಧಿಕಾರಿ ಶೇಖರ ಗೌಡ ಪಾಟೀಲ, ರಾಜ್ಯ ಘಟಕದ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಾಂತಾ ಪುತ್ತೂರು ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸ್ವಾಗತಿಸಿ, ಅಪೂರ್ವ ಕಾರಂತ ವಂದಿಸಿದರು. ರವೀಂದ್ರ ಕುಕ್ಕಾಜೆ, ಸಂಚಾಲಕಿ ಮಧುರಾ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net