ಮೂಲ ಸೌಲಭ್ಯ ಕಲ್ಪಿಸಲು ಯಲಬುರ್ಗಾ ಪಪಂ ಮುಖ್ಯಾಧಿಕಾರಿಗೆ ಜನರಿಂದ ಮನವಿ

Yelaburga People Appeal
ಯಲಬುರ್ಗಾದ ಆರು ಮತ್ತು ಏಳನೇ ವಾರ್ಡ್ ನಿವಾಸಿಗಳು ಪಪಂ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿಗೆ ಬುಧವಾರ ಮನವಿ ಸಲ್ಲಿಸಿದರು.
Published on

ಯಲಬುರ್ಗಾ: ಕುಡಿವ ನೀರಿನ ಸಮಸ್ಯೆ ನಿವಾರಣೆ ಹಾಗೂ ರಸ್ತೆ ದುರಸ್ತಿಗೆ ಆಗ್ರಹಿಸಿ ಪಟ್ಟಣದ ಆರು ಮತ್ತು ಏಳನೇ ವಾರ್ಡ್ ನಿವಾಸಿಗಳು ಪಪಂ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿಗೆ ಬುಧವಾರ ಮನವಿ ಸಲ್ಲಿಸಿದರು.

ಮುಖಂಡ ಶಿವರಾಜ ಉಪ್ಪಾರ್ ಮಾತನಾಡಿ, ಆರು ಮತ್ತು ಏಳನೇ ವಾರ್ಡ್‌ನಲ್ಲಿ ದೈನಂದಿನ ಬಳಕೆಗೆ ನೀರು ಲಭ್ಯವಿದೆ. ಆದರೆ, ಕುಡಿವ ನೀರಿಗಾಗಿ ಬೇರೆ ವಾರ್ಡ್‌ಗೆ ಅಲೆಯುವಂತಾಗಿದೆ. ಕೂಡಲೇ ಕುಡಿವ ನೀರಿನ ಸಮಸ್ಯೆ ನಿವಾರಿಸಬೇಕು. ಕನ್ನಡ ಕ್ರಿಯಾ ಸಮಿತಿ ವೃತ್ತದಲ್ಲಿ ವಾಲ್ವ್ ಗುಂಡಿ ಮುಚ್ಚಬೇಕು. ವಾರ್ಡ್ ರಸ್ತೆಗಳಲ್ಲಿರುವ ತಗ್ಗು ಗುಂಡಿಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಶರಣಗೌಡ, ಮಲ್ಲಪ್ಪ ಹೊಸಳ್ಳಿ, ಕಳಕಪ್ಪ, ಮಂಜುನಾಥ, ಬಸವರಾಜ, ಶ್ರೀಕಾಂತ ಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net