

ಮಾನ್ವಿ: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದಿಂದ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಪಟ್ಟಣದ ಶಾಸಕರ ಭವನದ ಅವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
3 ವರ್ಷ ಸೇವೆ ಸಲ್ಲಿಸಿದವರಿಗೆ ಅಂತರ ಜಿಲ್ಲಾ ವರ್ಗಾವಣೆಗಾಗಿ ಮಾರ್ಗಸೂಚಿ ರೂಪಿಸಬೇಕು, ಆಯುಕ್ತಾಲಯದ ಅಡಿ ರಾಜ್ಯ ಮಟ್ಟದ ಜ್ಯೇಷ್ಠತೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜ್ಯೇಷ್ಠತೆ ಪರಿಗಣಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಉಪ ತಹಸೀಲ್ದಾರ್ ವಿನಾಯಕ್ ರಾವ್, ವಿರುಪಣ್ಣ, ವಾಸವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂಗಮೇಶ ಮುಧೋಳ, ಹನುಮಂತರಾವ್ ಬೆಂಬಲ ನೀಡಿದರು.