ಶಿಥಿಲಾವಸ್ಥೆ ತಲುಪಿದ ಪ್ರವಾಸಿ ಮಂದಿರ

21myk1 story
Published on

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ

ಮಾಯಕೊಂಡ ಗ್ರಾಮದಲ್ಲಿರುವ ಸರ್ಕಾರಿ ನಿರೀಕ್ಷಣಾ ಮಂದಿರ ಶಿಥಿಲಾವಸ್ಥೆ ತಲುಪಿದೆ. ಜತೆಗೆ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, ಅಭಿವೃದ್ಧಿಗಾಗಿ ಕಾಯುತ್ತಿದೆ.

1986 ಸೆಪ್ಟೆಂಬರ್ 23 ರಂದು ಅಂದಿನ ಶಾಸಕ ಕೆ. ಮಲ್ಲಪ್ಪ ಅವರ ಅಧಿಕಾರಾವಧಿಯಲ್ಲಿ, ಲೋಕೋಪಯೋಗಿ ಮತ್ತು ನೀರಾವರಿ ಸಚಿವ ಎಚ್.ಡಿ. ದೇವೇಗೌಡ ಅವರಿಂದ ನಿರೀಕ್ಷಣಾ ಮಂದಿರ ಉದ್ಘಾಟನೆಗೊಂಡಿತು. 1993 ಜನವರಿ 26 ರಂದು ನಾಗಮ್ಮ ಕೇಶವಮೂರ್ತಿ ಶಾಸಕರಾಗಿದ್ದ ಅವಧಿಯಲ್ಲಿ ಊಟದ ಕೊಠಡಿಯ ನೂತನ ಕಟ್ಟಡ ಉದ್ಘಾಟಿಸಲಾಯಿತು.

38 ವರ್ಷ ಹಳೆಯದಾದ ಈ ಪ್ರವಾಸಿ ಮಂದಿರ ಕುಸಿದು ಬೀಳುವ ಹಂತ ತಲುಪಿದೆ. ಗೋಡೆಗಳಲ್ಲಿ ಬಿರುಕು ಮೂಡಿವೆ. ಮಳೆ ಬಂದರೆ ಊಟದ ಕೊಠಡಿ ಜಲಾವೃತಗೊಳ್ಳುತ್ತದೆ. ಅಲ್ಲದೇ ಗಾಡ್ರೆಜ್, ಕಬ್ಬಿಣದ ಪೈಪುಗಳು ಸೇರಿ ನಿರುಪಯುಕ್ತ ವಸ್ತುಗಳನ್ನು ತುಂಬಿ ದಾಸ್ತಾನು ಕೊಠಡಿಯಂತಾಗಿದೆ.

ಎರಡು ಕೊಠಡಿಗಳಿದ್ದು ಒಂದೊಂದು ಕೊಠಡಿಯಲ್ಲಿ ಎರಡೆರಡು ಕಬ್ಬಿಣದ ಮಂಚಗಳಿವೆ. ಹಾಸಿಗೆ ದಿಂಬುಗಳು ಹಾಳಾಗಿವೆ. ಶೌಚಗೃಹ ವ್ಯವಸ್ಥೆಯೂ ಅಷ್ಟಕಷ್ಟೇ. ಹವಾ ನಿಯಂತ್ರಣ, ಶುದ್ಧ ಕುಡಿಯುವ ನೀರು, ಬಿಸಿ ನೀರಿನ ವ್ಯವಸ್ಥೆಗಳ ಸೌಲಭ್ಯಗಳಿಲ್ಲ.

ಈಗಿರುವ ನಿರೀಕ್ಷಣಾ ಮಂದಿರದ ಹಳೆಯ ಕಟ್ಟಡವನ್ನು ನಾಶಪಡಿಸಿ ಮೂಲ ಸೌಕರ್ಯಗಳ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣ ಮಾಡಬೇಕೆಂದು ಮಾಯಕೊಂಡ ಸೇರಿ ಈ ಭಾಗದ ಹಲವಾರು ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಪ್ರವಾಸಿ ಮಂದಿರದ ನೂತನ ಕಟ್ಟಡಕ್ಕೆ ಈಗಾಗಲೇ 4 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು. | ಕೆ.ಎಸ್. ಬಸವಂತಪ್ಪ, ಶಾಸಕ. ಗ್ರಾಮಕ್ಕೆ ಅಗತ್ಯವಾದ ಸುಸಜ್ಜಿತ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಅಗ್ನಿಶಾಮಕ ಕಚೇರಿ, ಪಿಎಚ್​ಸಿಯನ್ನು ಸಿಎಚ್​ಸಿಯಾಗಿ ಮೇಲ್ದರ್ಜೆಗೇರಿಸುವುದು, ನಿರೀಕ್ಷಣಾ ಮಂದಿರ ಮತ್ತು ಎಸ್ಸಿ- ಎಸ್ಟಿ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯ ನೂತನ ಕಟ್ಟಡ ನಿರ್ವಣ, ಮದಕರಿ ನಾಯಕ ಸಮಾಧಿ ಸ್ಥಳದ ಅಭಿವೃದ್ಧಿ ಸೇರಿ ಹಲವು ಮೂಲ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. | ಸಿ. ಅನಿಲ್​ಕುಮಾರ್ ನಾಯ್್ಕ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ನಿರೀಕ್ಷಣಾ ಮಂದಿರದ ನೂತನ ಕಟ್ಟಡ ನಿರ್ವಣದ ಜತೆಗೆ ಮೂಲ ಸೌಲಭ್ಯಗಳ ಅಗತ್ಯ ಇದೆ. ಶಾಸಕರು ನಿರೀಕ್ಷಣಾ ಮಂದಿರವನ್ನು ಸಂಪೂರ್ಣ ವೀಕ್ಷಣೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆಯಾದ ಬಳಿಕ ಉತ್ತಮ ಕಟ್ಟಡ ನಿರ್ವಣವಾಗಲಿದೆ. | ಕುಮಾರ್ ನಾಯ್್ಕ ಎಇಇ, ಲೋಕೋಪಯೋಗಿ ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net