ಮೂಲ ಸೌಕರ್ಯಗಳಿಗೆ ಮೊದಲ ಅದ್ಯತೆ

21 GVT 06
ಗಂಗಾವತಿ 20ನೇ ವಾರ್ಡ್ ಮಡಿವಾಳರ ಓಣಿಯಲ್ಲಿ ಮುಖ್ಯ ಚರಂಡಿ ನಿರ್ಮಾಣಕ್ಕೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಸದಸ್ಯ ಸೋಮನಾಥ ಭಂಡಾರಿ, ವಾರ್ಡ್ ಮುಖಂಡರಾದ ಅರಳಿ ಅಮರೇಶಪ್ಪ, ನಾಗರಾಜ ಮಡಿವಾಳ, ಹನುಮಂತಪ್ಪ, ಮಂಜುನಾಥ, ಈರಣ್ಣ, ಗಣೇಶ ಇತರರಿದ್ದರು.
Published on

ಗಂಗಾವತಿ: ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ನೈರ್ಮಲೀಕರಣ ಸೇರಿ ಮೂಲ ಸೌಕರ್ಯಗಳಿಗೆ ಮೊದಲ ಅದ್ಯತೆ ನೀಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.

ನಗರದ 20ನೇ ವಾರ್ಡ್ ಮಡಿವಾಳರ ಓಣಿಯಲ್ಲಿ ಮುಖ್ಯ ಚರಂಡಿ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕೆಕೆಆರ್‌ಡಿಬಿಯ 25ಲಕ್ಷ ರೂ.ಅನುದಾನದಲ್ಲಿ ಚರಂಡಿ ನಿರ್ಮಿಸಲಾಗುತ್ತಿದ್ದು, ಮೂರ‌್ನಾಲ್ಕು ವಾರ್ಡ್‌ಗಳಿಗೆ ಅನುಕೂಲವಾಗಲಿದೆ.

ಗುಣಮಟ್ಟದ ಕಾಮಗಾರಿಯೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು. ನಗರಸಭೆ ಮಾಜಿ ಸದಸ್ಯ ಸಿದ್ದಾಪುರ ರಾಚಪ್ಪ ಮಾತನಾಡಿ, ಶಾಸಕ ಗಾಲಿ ಜನಾರ್ದನರೆಡ್ಡಿ ಸಹಕಾರರೊಂದಿಗೆ ಬಹುವರ್ಷದ ನಂತರ ಚರಂಡಿ ಕಾಮಗಾರಿಗೆ ಯೋಗ ಕೂಡಿಬಂದಿದೆ. 4 ಅಡಿ ಅಳ ಮತ್ತು 2 ಅಡಿ ಅಗಲದ ಚರಂಡಿ ನಿರ್ಮಾಣವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net