‘ಬಾಶೋ ಹಾಯ್ಕು’ ಪುಸ್ತಕ ಬಿಡುಗಡೆ

17
Published on

ಮೈಸೂರು: ಆಕೃತಿ ಪುಸ್ತಕ ಬೆಂಗಳೂರು ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಸಿ.ರವೀಂದ್ರನಾಥ್ ಕನ್ನಡಕ್ಕೆ ಅನುವಾದಿಸಿರುವ ‘ಬಾಶೋ ಹಾಯ್ಕು’ ಪುಸ್ತಕವನ್ನು ವಿಮರ್ಶಕ ಪ್ರೊ.ಒ.ಎಲ್.ನಾಗಭೂಷಣ ಸ್ವಾಮಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಜಪಾನ್‌ನ ಕವಿ ಬಾಶೋ ತನ್ನ ಹಾಯ್ಕುಗಳಲ್ಲಿ ವಿವಿಧ ವಿಚಾರಗಳನ್ನು ಸಂಕ್ಷಿಪ್ತವಾಗಿ ಮಂಡಿಸುತ್ತಾನೆ. ಓದುಗ ಅದನ್ನು ತನ್ನ ಮನದಲ್ಲಿರಿಸಿ, ಕಲ್ಪನೆಯನ್ನು ಬೆರೆಸಿ ಅರ್ಥೈಸಿಕೊಳ್ಳಬಹುದು. ಆಗ ಅದು ವಿವಿಧ ಅನುಭವಗಳಿಗೆ ಕಾರಣವಾಗಬಹುದು. ಈ ರೀತಿಯ ಸಾಹಿತ್ಯ ವಿಧಾನಕ್ಕೆ ಜೆನ್ ಕಾರಣವೋ, ಬುದ್ಧನ ಪ್ರಭಾವವೋ ಇರಬಹುದು ಎಂದರು.

ಕವಯತ್ರಿ ಆರ್.ಪವಿತ್ರಾ ಪ್ರಿಯಾಭಾಷಿಣಿ ಪುಸ್ತಕ ಕುರಿತು ಮಾತನಾಡಿ, ಬಾಶೋ ಹಾಯ್ಕುಗಳೊಂದಿಗೆ ಓದುಗರು ಪಯಣ ಬೆಳೆಸಬಹುದು. ಆತನ ನಿರ್ಲಿಪ್ತತೆಯ ಅನುಭವ, ಪರಿಸ್ಥಿತಿಗಳಿಗೆ ಮೂಗನಾಗಿ ಚಿತ್ರಿಸುವ ಕಲೆ ನಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ ಎಂದರು.
ಪ್ರಕಾಶಕರಾದ ಡಿ.ಎನ್.ಗುರುಪ್ರಸಾದ್, ಅನುವಾದಕ ಡಾ.ಸಿ.ರವೀಂದ್ರನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net