ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಆರೋಪ: ಚಿಕ್ಕಳ್ಳಿ ಕೃಷ್ಣಮೂರ್ತಿ ಟೀಕೆ

Published on

ಮೈಸೂರು: ಬಿಜೆಪಿ ನಾಯಕರು ದುರುದ್ದೇಶ ಹಾಗೂ ದ್ವೇಷದ ರಾಜಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕಳ್ಳಿ ಕೃಷ್ಣಮೂರ್ತಿ ಟೀಕಿಸಿದ್ದಾರೆ.
ಯಾವುದೇ ಲೋಪ ಇಲ್ಲದೆ ಆಡಳಿತ ನೀಡಿರುವ ಸಿದ್ದರಾಮಯ್ಯ ಅವರು ನಾಡಿನ ಎಲ್ಲ ಜನರಿಗಾಗಿ ಉಚಿತ ವಿದ್ಯುತ್, ಮಹಿಳೆಯರಿಗೆ ಭಾಗ್ಯಲಕ್ಷ್ಮಿ ಯೋಜನೆ, ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, ಯುವ ನಿಧಿಯಂತಹ ಯೋಜನೆಗಳನ್ನು ಕೊಟ್ಟು ನೆರವಾಗಿದ್ದಾರೆ. ಇವರ ಜನಪ್ರಿಯತೆ ಸಹಿಸದೆ ಪ್ರತಿಪಕ್ಷಗಳು ಇಂತಹ ಟೀಕೆ ಮಾಡುತ್ತಿವೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.
ಬಿಜೆಪಿ ಈ ಯೋಜನೆಗಳನ್ನು ನೀಡಲು ಅವರ ರಾಜಕೀಯ ಅಂತ್ಯದ ದಿನಗಳವರೆಗೂ ಸಾಧ್ಯವಿಲ್ಲ. ವಾಮಮಾರ್ಗದಲ್ಲಿ ಅಧಿಕಾರಕ್ಕೆ ಏರಿದ್ದ ಬಿಜೆಪಿ ಈಗ ನಿಷ್ಟಾವಂತ ರಾಜಕಾರಣಿ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ. ಯಾರು ಏನು ಮಾಡಿದರೂ ಸಿದ್ದರಾಮಯ್ಯ ಅವರು ಅವಧಿಪೂರ್ಣ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net