

ವಿಜಯವಾಣಿ ಸುದ್ದಿಜಾಲ ಧಾರವಾಡ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಬಾಸೆಲ್ ಮಿಶನ್ ಪದವಿ ಪೂರ್ವ ಮಹಾವಿದ್ಯಾಲಯದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಕಲಾ ವಿಭಾಗದಲ್ಲಿ ಲೀಲಾವತಿ ಚವರದ ಶೇ. 90.17 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಶ್ಯಾಮ ಏಕಬೋಟೆ ಶೇ. 92.50 ಪ್ರಥಮ, ಪ್ರಜ್ಞಾ ಪುರೋಹಿತ ಶೇ. 92 ದ್ವಿತೀಯ, ಭಗವಾನ ಶಲಗಿ ಶೇ. 87.17 ತೃತೀಯ ಹಾಗೂ ಕಾವೇರಿ ಹಾದಿಮನಿ ಶೇ. 87.00 ಅಂಕ ಗಳಿಸಿದ್ದಾಳೆ. ನಂದಿನಿ ಲಮಾಣಿ ಶೇ. 86.67 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದಾಳೆ.