12 ದಿನದೊಳಗೆ ಸೋಂಕಿತರು ಡಿಸ್ಚಾರ್ಜ್, ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ

corona new
Published on

ಉಡುಪಿ: ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಪಾಸಿಟಿವ್ ಸೋಂಕಿತರು ಶೀಘ್ರ ಗುಣಮುಖರಾಗಲಿದ್ದು, ಹತ್ತು, ಹನ್ನೆರಡು ದಿನಗಳಲ್ಲಿ ಎಲ್ಲರೂ ಗುಣವಾಗಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಮಣಿಪಾಲ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಉಡುಪಿಯಲ್ಲಿ ಹೊರ ರಾಜ್ಯದಿಂದ ಜನರು ಆಗಮಿಸಿದ ಬಳಿಕ ಸೋಂಕು ಹೆಚ್ಚಳವಾಯಿತು. ಈ ಆತಂಕದ ನಡುವೆಯೂ 274 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸ್ಥಳೀಯವಾಗಿ 13 ಮಂದಿಯಲ್ಲಷ್ಟೇ ಸೋಂಕು ಕಾಣಿಸಿಕೊಂಡಿದೆ.

'ಮುಂಬೈಯಿಂದ ಬಂದವರನ್ನು 7 ದಿನ ಸಾಂಸ್ಥಿಕ ಕ್ವಾರಂಟೈನ್ ಬದಲಿಗೆ ನೇರ ಹೋಂ ಕ್ವಾರಂಟೈನ್ ಮಾಡಿ ಆ ಮನೆಯನ್ನು ಸೀಲ್‌ಡೌನ್ ಮಾಡುವ ಬಗ್ಗೆ ಎಲ್ಲ ಶಾಸಕರು ಸಲಹೆ ನೀಡಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಕುಂದಾಪುರ ಮತ್ತು ಕಾರ್ಕಳದ ಆಸ್ಪತ್ರೆಗಳಿಗೆ ಉಡುಪಿ ಜಿಲ್ಲಾಸ್ಪತ್ರೆಯ ಪ್ರಮಾಣದಷ್ಟು ಸಿಬ್ಬಂದಿ ನೇಮಿಸುವ ಚಿಂತನೆ ನಡೆಸಲಾಗಿದೆ. ಆಶಾ, ಆರೋಗ್ಯ ಕಾರ್ಯಕರ್ತರು, ಎಎನ್‌ಎಂ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳುವ ಕುರಿತಂತೆ ಶೀಘ್ರ ಆದೇಶ ನೀಡಲಾಗುವುದು.

-ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net