ಬಸವೇಶ್ವರರ ಜಯಂತ್ಯೋತ್ಸವ ಅದ್ದೂರಿ ಆಚರಣೆ grand

grand ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಕುಬಸದ.
grand ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಕುಬಸದ.
Published on

ಪ್ರಮುಖ ಮುಖ್ಯಾಂಶಗಳು

  • 17 ರಿಂದ 20ರವರೆಗೆ ಮೂರುಸಾವಿರಮಠದಲ್ಲಿ ವಿವಿಧ ಕಾರ್ಯಕ್ರಮ.
  • ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು.
  • ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು.
ನಗರದಲ್ಲಿ ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಕುಬಸದ, 17ರಂದು ಬೆಳಗ್ಗೆ 8.30ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಶ್ರೀಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನೆರವೇರಿಸುವರು. ಎಂಎಲ್​ಸಿ ಎಫ್.ಎಚ್. ಜಕ್ಕಪ್ಪನವರ ಹಾಗೂ ಇತರರು ಪಾಲ್ಗೊಳ್ಳುವರು ಎಂದರು.
ಮನೆ ಮನಗಳಲ್ಲಿ ಬಸವ ಸಂದೇಶ ಸಾರುವ ಉದ್ದೇಶದಿಂದ ಅಂದು ಬೆಳಗ್ಗೆ 10 ಗಂಟೆಗೆ ಶ್ರೀಮಠದ ಆವರಣದಿಂದ ಆರಂಭಗೊಳ್ಳುವ ಬೈಕ್ ರ್ಯಾಲಿಗೆ ಮಹಾನಗರ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಸದಾನಂದ ಡಂಗನವರ, ಪ್ರಕಾಶ ಬುರಬುರೆ, ಡಾ. ರಮೇಶ ಮಹಾದೇವಪ್ಪನವರ ಹಾಗೂ ರಾಜೇಶ್ವರಿ ಕಟ್ಟಿಮನಿ ಚಾಲನೆ ನೀಡುವರು ಎಂದು ತಿಳಿಸಿದರು.
18ರಂದು ಸಂಜೆ 4 ಗಂಟೆಗೆ ಮಹಿಳೆಯರಿಂದ ಹಾಗೂ ಮಕ್ಕಳಿಂದ ಶ್ರೀ ಬಸವಣ್ಣನವರ ವಚನ ಸ್ಪರ್ಧೆ ಆಯೋಜಿಸಲಾಗಿದೆ.
5.30ಕ್ಕೆ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು.
ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
19ರಂದು ಸಂಜೆ 4 ಗಂಟೆಗೆ ಮಹಿಳೆಯರು ಮತ್ತು ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
5 ಗಂಟೆಗೆ ಮಣಕವಾಡ ದೇವಮಂದಿರದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಅವರಿಂದ ಪ್ರವಚನ ಏರ್ಪಡಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು.
ಎಂಎಲ್​ಸಿ ಪ್ರದೀಪ ಶೇಟ್ಟರ್, ಎಸ್.ವಿ. ಸಂಕನೂರ, ಮೇಯರ್ ಜ್ಯೋತಿ ಪಾಟೀಲ ಹಾಗೂ ಇನ್ನಿತರರು ಅತಿಥಿಗಳಾಗಿ ಭಾಗವಹಿಸುವರು.
20ರಂದು ಬೆಳಗ್ಗೆ 8.30ಕ್ಕೆ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಸಂಜೆ 4 ಗಂಟೆಗೆ ಶ್ರೀಮಠದಿಂದ ಆರಂಭಗೊಳ್ಳುವ ವಿಶ್ವಗುರು ಬಸವಣ್ಣನವರ ಭವ್ಯ ಮೆರವಣಿಗೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡುವರು.
ಡೊಳ್ಳು ಕುಣಿತ, ಕೋಲಾಟ, ಕರಡಿ ಮಜಲು, ಜಗ್ಗಲಗಿ, ಭಜನಾ ಮೇಳ, ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯು ದಾಜಿಬಾನಪೇಟ, ಹೊಸ ಮೇದಾರ ಓಣಿ, ಬ್ರಾಡವೇ, ದುರ್ಗದಬೈಲ, ಬೆಳಗಾವಗಲ್ಲಿ, ಮಹಾವೀರಗಲ್ಲಿಯಲ್ಲಿ ಸಂಚರಿಸಿ, ಮರಳಿ ಶ್ರೀಮಠ ತಲುಪುವುದು ಎಂದು ವಿವರಿಸಿದರು.
ಸಮಿತಿ ಪ್ರಮುಖರಾದ ನಿತ್ಯಾನಂದ ಮತ್ತೂರಮಠ, ಶಿವು ಮೆಣಸಿನಕಾಯಿ, ಪ್ರಕಾಶ ಬುರಬುರೆ, ಸರೋಜಾ ಹೂಗಾರ, ರಾಜೇಶ್ವರಿ ಕಟ್ಟಿಮನಿ, ಚನ್ನು ಹೊಸಮನಿ, ಚನ್ನಬಸಪ್ಪ ಧಾರವಾಡಶೆಟ್ರ, ರಾಜು ಕೋರ್ಯಾಣಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net