

ಕೊಳ್ಳೇಗಾಲ: ತಾಲೂಕಿನ ಕೊಂಗರಹಳ್ಳಿ ಗ್ರಾಮದ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಮಠದಲ್ಲಿ ಫೆ.9 ಮತ್ತು 10 ರಂದು ಶ್ರೀಮಠದ ಕಟ್ಟಡ ಉದ್ಘಾಟನೆ ಮತ್ತು ಲಿಂಗೈಕ್ಯ ಶ್ರೀಬಸಪ್ಪದೇವರು ಸ್ವಾಮಿಗಳ ಗದ್ದುಗೆಗೆ ಬಸವೇಶ್ವರಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
9ರ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ, ಸಂಜೆ 4 ಗಂಟೆಗೆ ಗ್ರಾಮದ ಬೀದಿಗಳಲ್ಲಿ ವೀರಗಾಸೆ, ಮಂಗಳ ವಾದ್ಯಗಳೊಂದಿಗೆ ಶ್ರೀ ಬಸವೇಶ್ವರ ಮೂರ್ತಿಯ ಮೆರವಣಿಗೆ ನಡೆಯಲಿದೆ. 6.30ರಿಂದ 10 ಗಂಟೆಯವರೆಗೆ ವಿವಿಧ ಪೂಜೆಗಳು ನಡೆಯಲಿವೆ. ೆ.10ರಂದು ಬೆಳಗ್ಗೆ 4 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ಶಿಖರ ಕಳಸ ಸ್ಥಾಪನೆ, ಬೆಳಗ್ಗೆ 5 ಗಂಟೆಗೆ ಹೋಮ-ಹವನ, 9 ಗಂಟೆಗೆ ಮಹಾ ಮಂಗಳಾರತಿ, 10 ಗಂಟೆಗೆ ದೇವನೂರು ಮಠದ ಮಹಾಂತ ಸ್ವಾಮೀಜಿ ಅವರಿಗೆ ಪಾದಪೂಜೆ ನಡೆಯಲಿದೆ. ೆ.11ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಸ್ವಾಮಿ ಮಠದ ವರಗುರು ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ವೀರಗಾಸೆ, ಮಂಗಳವಾದ್ಯದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಎಲ್ಲ ಧಾರ್ಮಿಕ ಕಾರ್ಯಗಳು ಕಾಮಗೆರೆ ಪಟ್ಟದಮಠದ ಶ್ರೀ ಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಕಾಮಗೆರೆ ಬಿಕ್ಷದ ಮಠದ ಶ್ರೀ ಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.