ಬಸವೇಶ್ವರ ಪ್ರಥಮ ಸಂಸತ್ತಿನ ರಚನಕಾರ

Basaveshwara was the architect of the first Parliament
ವಿಜಯಪುರದ ಕಸಾಪ ಸಭಾಂಗಣದಲ್ಲಿ ಬಸವೇಶ್ವರ ಜಯಂತಿ ಹಿನ್ನೆಲೆ ನಡೆದ ಕವಿಗೋಷ್ಠಿಯನ್ನು ಡಾ. ರೇಖಾ ಪಾಟೀಲ ಉದ್ಘಾಟಿಸಿದರು. ಹಾಸಿಂಪೀರ ವಾಲೀಕಾರ, ಸವಿತಾ ದೇಶಮುಖ, ಡಾ. ಆನಂದ ಕುಲಕರ್ಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾಮಾಜಿಕ ಚಿಂತನೆ ಹರಿಕಾರರಾಗಿ, ಮಹಾನ್​ ಮಾನವತಾವಾದಿ, ವಿಶ್ವಗುರುವಾಗಿ, ಸಾಂಸತಿಕ ನಾಯಕನಾಗಿ ಹೊರಹೊಮ್ಮಿದ ಮತ್ತು ತಮ್ಮ ವಚನಗಳ ಮೂಲಕ ಇಡೀ ಸಮಾಜವನ್ನು ಧರ್ಮದ ನೆಲೆಗಟ್ಟಿನಲ್ಲಿಯೇ ಕಟ್ಟಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ರೇಖಾ ಪಾಟೀಲ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು, ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಬಸವೇಶ್ವರ ಜಯಂತಿ ನಿಮಿತ್ತ ನಡೆದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿ, ವರ್ಣರಹಿತ, ವರ್ಗರಹಿತ ಮತ್ತು ಲಿಂಗರಹಿತ ಸಮಾಜ ಕಟ್ಟುವ ಮೂಲಕ ಅಂದಿನ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಮುಕ್ತವಾಗಿ ಸಿ ಸಮಾನತೆ ಮೂಲಕ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟ ಬಸವೇಶ್ವರರು ಪ್ರಥಮ ಸಂಸತ್ತಿನ ರಚನಕಾರರಾಗಿದ್ದರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ಕವಿಗೋಷ್ಠಿ ಅಧ್ಯಕ್ಷತೆವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಬಸವಣ್ಣನವರು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಇರುವ ಕಾಳಜಿ ಕಳಕಳಿಗಳೆ ಅವರನ್ನು ಇಂದು ಅವತಾರಿ ಪುರುಷರಾಗಿ ದೈವತ್ವದ ಸ್ಥಾನವನ್ನು ತಂದುಕೊಡಲು ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ರೇಡಿಯೋ ಪ್ರವಾಚಕಿ ಸವಿತಾ ದೇಶಮುಖ, ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಾ ಮುರಾಳ, ಮಡಿವಾಳಮ್ಮ ನಾಡಗೌಡ, ಶಾಂತಾ ವಿಭೂತಿ, ಶೇಷರಾವ ಮಾನೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಅಕ್ಕಮಹಾದೇವಿ ಮಹಿಳಾ ವಿವಿಯ ಚೈತ್ರಾವತಿ, ಪೂಜಾ ಹಾಗೂ ರಾಗಿಣಿ ಪ್ರಾರ್ಥಿಸಿದರು. ಡಾ. ಮಾಧವ ಗುಡಿ ಸ್ವಾಗತಿಸಿದರು. ಸಿದ್ಧನಗೌಡ ಕಾಶಿನಕುಂಟಿ ನಿರೂಪಿಸಿದರು. ಅನ್ನಪೂರ್ಣ ಬೆಳ್ಳೆಣ್ಣವರ ವಂದಿಸಿದರು.

ಕವಿತೆ ವಾಚಿಸಿದ ಕವಿಗಳು: ಕವಿಗೋಷ್ಠಿಯಲ್ಲಿ ಕವಿತಾ ಕಲ್ಯಾಣಪ್ಪಗೋಳ, ಅಂಬಿಕಾ ಕರಕಪ್ಪಗೋಳ, ಪ್ರೊ. ಸಿದ್ದು ಸಾವಳಸಂಗ, ಹೇಮಾ ಬಿರಾದಾರ, ಭಾರತಿ ಗೊಂಗಡಿ, ವೈಶಾಲಿ ಬಿಳೂರ, ಶಾಂತಲಾ ಪಾಟೀಲ, ಶಿಲ್ಪಾ ಹಂಜಿ, ದಾನಮ್ಮ ಹೂಗಾರ, ಆಕಾಶ ಮ್ಯಾಗೇರಿ, ಶಿವಾಜಿ ಮೋರೆ, ಸಿದ್ಧನಗೌಡ ಕಾಶಿನಕುಂಟಿ, ಸಂತೋಷಕುಮಾರ ಬಂಡೆ, ಸುರೇಶ ಪೂಜಾರಿ, ಶಿವಲೀಲಾ ಕೋರವಾರ, ಸುಜಾತಾ ಹ್ಯಾಳದ, ರಜಿಯಾ ದಳವಾಯಿ, ಶೋಭಾ ಹರಿಜನ, ಸಂತೋಷ ಪಾಟೀಲ, ಸುನಂದಾ ಕೋರಿ, ಸಂಗಮೇಶ ಕರೆಪ್ಪಗೋಳ, ಶೋಭಾ ಹರಿಜನ ಸೇರಿ 25 ಕ್ಕೂ ಅಧಿಕ ಕವಿಗಳು ಬಸವೇಶ್ವರರ ಕುರಿತ ಕವನ ವಾಚಿಸಿದರು. ನಂತರ ಕವನವಾಚಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net