

ನರಗುಂದ: ತಾಲೂಕಿನ ಜಗಾಪೂರ ಗ್ರಾಮದಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ಪಟ್ಟಣದ ಬಸವೇಶ್ವರ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ಬಾಲಕರ ವಿಭಾಗ: ಕಬಡ್ಡಿ, ಥ್ರೋಬಾಲ್ ಪ್ರಥಮ, ಖೋಖೋ ದ್ವಿತೀಯ. ಬಾಲಕಿಯರ ಗುಂಪು ಸ್ಪರ್ಧೆಗಳ ವಿಭಾಗದಲ್ಲಿ ಖೋಖೋ, ಥ್ರೋಬಾಲ್, ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ವೈಯಕ್ತಿಕ ವಿಭಾಗದ ಚಕ್ರ ಎಸೆತದಲ್ಲಿ ಪ್ರಜ್ವಲ್ ಬೇವಿನಗಿಡದ ದ್ವಿತೀಯ, 200 ಮೀಟರ್ ಓಟದಲ್ಲಿ ಅಮಿತ್ ಪಾಟೀಲ ದ್ವಿತೀಯ, 400 ಮೀಟರ್ ಓಟದಲ್ಲಿ ಆಕಾಶ ಹೆಬಸೂರ ಪ್ರಥಮ, ಎತ್ತರ ಜಿಗಿತ-ರಾಮನಗೌಡ ಕೆಂಚನಗೌಡ್ರ ಪ್ರಥಮ, 800 ಮೀಟರ್ ಹಾಗೂ 1,500 ಮೀಟರ್ ಓಟದಲ್ಲಿ ವೆಂಕಟೇಶ ಬಾಲರಡ್ಡಿ ಪ್ರಥಮ, 400 ಮೀಟರ್ ಓಟದಲ್ಲಿ ವಿನಾಯಕ ಗುಡಿಸಾಗರ ತೃತೀಯ, 100 ಮೀಟರ್ ಓಟ ಹಾಗೂ ಗುಂಡು ಎಸೆತದಲ್ಲಿ ಆಕಾಶ ಆದೆಪ್ಪನವರ ಪ್ರಥಮ ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ಸ್ಪರ್ಧೆಗಳಾದ ಚಕ್ರ ಎಸೆತದಲ್ಲಿ ವೈಷ್ಣವಿ ಮಿಕ್ಕಲ್ ಪ್ರಥಮ, 1500 ಮೀಟರ್ ಓಟ ಸಂಜನಾ ಯರಗಟ್ಟಿ ಪ್ರಥಮ, ಉದ್ದ ಜಿಗಿತದಲ್ಲಿ ಸಾಕ್ಷಿ ಲಿಂಬಿಕಾಯಿ ದ್ವಿತೀಯ, 3 ಕಿ.ಮೀ ನಡಿಗೆಯಲ್ಲಿ ಅಪೂರ್ವಾ ಹಿರೇಮಠ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚನ್ನಬಸಪ್ಪ ಕಂಠಿ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಫ್ರೀನ್ ಪಟೇಲ್, ಶಾಲಾ ನಿರ್ದೇಶಕ ಮಂಡಳಿ ಸದಸ್ಯ ಶಿವಕುಮಾರ ಕಂಠಿ, ಶ್ರೀಕಾಂತ ಕಂಠಿ, ಆಡಳಿತಾಧಿಕಾರಿ ಕಾವೇರಿ ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ರಾಜೇಸಾಬ್ ಆಶೇಖಾನವರ, ಸಿಕಂದರ್ ಪಠಾಣ, ಕಸ್ತೂರಿ ಹುಡೇದ, ಬಿಬಿಜಾನ್ ಅತ್ತಾರ, ರಬ್ಬಾನಿ ನದಾಫ್, ಇತರರಿದ್ದರು.