ಬಸವೇಶ್ವರ ತೊಟ್ಟಿಲೋತ್ಸವ

19BLH1
Published on

ಬೈಲಹೊಂಗಲ: ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಲಿಂ. ನೀಲಕಂಠ ಮಹಾಶಿವಯೋಗಿಶ್ವರ ಜಾತ್ರಾ ಮಹೋತ್ಸವ ಹಾಗೂ ಲಿಂ. ಗಂಗಾಧರ ಸ್ವಾಮೀಜಿ 72ನೇ ಜಯಂತಿ ಮತ್ತು ಮಹಾಶಿವರಾತ್ರಿ ಉತ್ಸವ ಅಂಗವಾಗಿ ಜರುಗುತ್ತಿರುವ ಮಹಾದಾಸೋಹಿ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಮಹಿಳೆಯರಿಂದ ಬಾಲ ಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ನೆರವೇರಿತು.

ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಾಲ ಬಸವಣ್ಣನ ಭಾವಚಿತ್ರ ತೊಟ್ಟಿಲಲ್ಲಿ ಹಾಕಿ ಪೂಜೆ ಸಲ್ಲಿಸಲಾಯಿತು.

ಶರಣೆಯರು ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು. ಪ್ರವಚನಕಾರ ಹರ್ಲಾಪುರ ಹರ್ತಿಮಠದ ಸದಾನಂದ ಶಾಸಿ ಮಾರ್ಗದರ್ಶನ ಮಾಡಿದರು. ತಿಪ್ಪಣ್ಣ ಬಿಳ್ಳೂರ, ಮಹಾಂತೇಶ ಅಕ್ಕಿ, ಶಿವಬಸಪ್ಪ ತುರಮರಿ, ಶೋಭಾ ಛಬ್ಬಿ, ರತ್ನಾ ಬಿಳ್ಳೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net