ಮಾರ್ಚ್ 1ರಂದು ಬಸವೇಶ್ವರ ಸ್ವಾಮಿ ರಥೋತ್ಸವ

IMG_0157 (1)-05
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಭೀಮಸಮುದ್ರ ಬಸವಾಪುರದಲ್ಲಿ ಮಾರ್ಚ್ 1ರಂದು ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವದ ಜರು ಗಲಿದೆ. ಇದರ ಅಂಗವಾಗಿ ಫೆ.25ರಿಂದ ಮಾ.2ರವರೆಗೆ ನಾನಾ ಧಾರ್ಮಿಕ ಕಾರ‌್ಯಕ್ರಮಗಳನ್ನು ಆಯೋಜಿಸಲಾಗಿದೆ.

25ರಂದು ರುದ್ರಾಭಿ ಷೇಕ,ಕಂಕಣಧಾರಣೆ,ಪಲ್ಲಕ್ಕಿ ಉತ್ಸವ ಧ್ವಜಾರೋಹಣ,26ರಂದು ಅಶ್ವೋತ್ಸವ,27ರಂದು ವೃಷಭೋತ್ಸವ,28ರಂದು ಗಜೋತ್ಸವ ಹಾಗೂ 10 ಗಂಟೆಗೆ ಕೆಂಡಾರ್ಚನೆ ಸೇವೆ ಹಾಗೂ ಮಾರ್ಚ್ 1ರಂದು ಬೆಳಗ್ಗೆ 11 ಗಂಟೆಗೆ ಸಾಮೂಹಿಕ ವಿವಾಹ ಮಹೋತ್ಸವವನ್ನು ಏರ್ಪಡಿಸಲಾಗಿದೆ.

ವರನಿಗೆ ಬಟ್ಟೆ,ವಧುವಿಗೆ ತಾಳಿ ವಿತರಿಸಲಾಗುವುದು. ಅಂದು ಸಂಜೆ 4 ಗಂಟೆಗೆ ಹೂವಿನ ಅಡ್ಡಪಲ್ಲಕ್ಕಿ ನಂತರ 5 ಗಂಟೆಗೆ ರಥೋತ್ಸವ ನಡೆಯ ಲಿದೆ. 2ರಂದು ಕಂಕಣ ವಿಸರ್ಜನೆ ಮಾಗೂ ಮಹಾಮಂಗಳಾರತಿ ಇರುತ್ತದೆ. ಸ್ವಾಮಿ ನೂತನ ದೇವಾಲಯ ನಿರ್ಮಾಣಕ್ಕಾಗಿ ನೀಡಿದ್ದ ಆರ್ಥಿಕ ನೆರವಿನ ವಾಗ್ದಾನವನ್ನು ಕೂಡಲೇ ಈಡೇರಿಸುವಂತೆ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಟ್ರಸ್ಟ್ ಉಪಾಧ್ಯಕ್ಷ ಬಿ.ಎಸ್.ವಿಶ್ವನಾಥಪ್ಪ ಪಟೇಲ್ ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net