ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

mahasabhe
Published on

ಕುಶಾಲನಗರ: ಇಲ್ಲಿನ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಎಸ್.ಶಾಂಬಶಿವಯ್ಯ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಎಪಿಸಿಎಂಎಸ್ ಸಭಾಂಗಣದಲ್ಲಿ ಜರುಗಿತು.

ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭ ಸಂಘದ ಅಧ್ಯಕ್ಷ ಶಾಂಬಶಿವಯ್ಯ ಮಾತನಾಡಿ, ಕುಶಾಲನಗರ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕುಗಳ ವ್ಯಾಪ್ತಿಗೊಳಪಟ್ಟು ಆರಂಭಿಸಿರುವ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದಲ್ಲಿ ೧೨೧೦ ಸದಸ್ಯರಿದ್ದು ೩೧,೯೦ ಲಕ್ಷ ರೂಗಳ ಷೇರು ಬಂಡವಾಳ ಸಂಗ್ರಹವಾಗಿದೆ. ೧,೭೫ ಕೋಟಿ ಠೇವಣಿ ಸಂಗ್ರಹಿಸಿ ಸದಸ್ಯರ ಬೇಡಿಕೆಗೆ ಅನುಗುಣವಾಗಿ ೨.೧ ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ಸಾಲಗಾರ ಸದಸ್ಯರು ಆಕಸ್ಮಿಕವಾಗಿ ಮರಣ ಹೊಂದಿದರೆ ಅವರ ಅವಲಂಬಿತರಿಗೆ ತೊಂದರೆಯಾಗದಂತೆ ವಿಮೆ ಮಾಡಿಸಲಾಗಿದೆ. ವಾಹನಗಳಿಗೂ ವಿಮೆ ಸೌಲಭ್ಯ ಮಾಡಿಸಲಾಗುತ್ತಿದ್ದು, ಇದರ ಸೌಲಭ್ಯಗಳನ್ನು ಸದಸ್ಯರು ಪಡೆಯಬೇಕೆಂದು ಕೋರಿದರು.

ಸಂಘದ ಲೆಕ್ಕ ಪತ್ರಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕಾಮನ್ ಸರ್ವೀಸ್ ಸೆಂಟರ್ ತೆರೆಯಲಾಗುತ್ತಿದೆ. ೨೦೨೫-೨೬ ನೇ ಸಾಲಿನಲ್ಲಿ ಸಂಘದಿಂದ ೧,೧೮ ಕೋಟಿ ಸಾಲ ವಿತರಿಸಿ ೮೫ ಸಾವಿರ ಪ್ರೀಮಿಯಂ ಪಾವತಿಸಲಾಗಿದೆ ಎಂದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಚ್.ಪಿ.ಉದಯಕುಮಾರ್, ಎಚ್.ಎಸ್.ಪುಟ್ಟರಾಜು, ಪ್ರಶಾಂತ್, ಯಶೋಧ ಮಹದೇವಪ್ಪ, ಮಮತಾ ಸಂಘದ ಕಾರ್ಯನಿರ್ವಹಣಾಧಿಕಾರಿ ಬಸವಣ್ಣಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net