

ಮುನವಳ್ಳಿ: ಗ್ರಾಹಕ&ಸದಸ್ಯರ ಸಹಕಾರ, ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಆಡಳಿತ ಮಂಡಳಿ ಮಾರ್ಗದರ್ಶನದಲ್ಲಿ ಶ್ರೀ ಬಸವೇಶ್ವರ ಕೋ&ಆಪ್ ಕ್ರೆಡಿಟ್ ಸೊಸೈಟಿ ಪ್ರಗತಿಯತ್ತ ಸಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 6.80 ಲ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯ ರವಿ ದ್ಯಾಮನಗೌಡರ ಎಂದು ಹೇಳಿದರು.
ಪಟ್ಟಣದ ಸೊಸೈಟಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 29ನೇ ವಾರ್ಷಿಕ ಮಹಾಸಭೆ ಅಧ್ಯತೆ ವಹಿಸಿ ಮಾತನಾಡಿ, ಸಂವು 27.56 ಲ ರೂ. ಷೇರು ಬಂಡವಾಳ, 1.87 ಕೋಟಿ ರೂ. ಠೇವಣಿ, ದುಡಿಯುವ ಬಂಡವಾಳ 2.90 ಕೋಟಿ ರೂ. ಹೊಂದಿದೆ. ಸದಸ್ಯರಿಗೆ 1.99 ಕೋಟಿ ರೂ. ಸಾಲ ವಿತರಿಸಲಾಗಿದೆ. ಷೇರು ಸದಸ್ಯರಿಗೆ ಶೇ.10 ಲಾಭಾಂಶ ವಿತರಿಸಲಾಗುವುದು ಎಂದರು.
ಸಂದ ಮುಖ್ಯ ಕಾರ್ಯನಿರ್ವಾಹಕಿ ನಿರ್ಮಲಾ ಮಂಡಿ ವಾರ್ಷಿಕ ವರದಿ ಮಂಡಿಸಿ, ಸಂದಲ್ಲಿ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆ ಉಪಾಧ್ಯ ಚನ್ನಮಲ್ಲಪ್ಪ ನಾಶಿಪುಡಿ, ನಿರ್ದೇಶಕರಾದ ಎಂ.ಆರ್.ಗೋಪಶೆಟ್ಟಿ, ರಮೇಶ ಗೋಮಾಡಿ, ಶ್ರೀಶೆಲ ಉಜ್ಜಿನಕೊಪ್ಪ, ಮುಬಾರಕ್ ಭೆರಕದಾರ, ಮೋಹನ ನಾಗೇಶನವರ, ಸುರೇಶ ನಲವಡೆ, ವಿಷ್ಣು ಪಾಲನಕರ, ಪಂಚಪ್ಪ ತಳವಾರ, ವಿಠ್ಠಲ ಯರಗಟ್ಟಿ, ದ್ಯಾಮಣ್ಣ ದೊಡಮನಿ, ಸುಶೀಲಾಬಾಯಿ ಹನಮಸಾಗರ, ವರಲಕ್ಷಿ$್ಮ ಹಂದಿಗೋಳ, ಮಹಾಂತೇಶ ರೇವಡಗಿ, ಶಿವಾನಂದ ರೇವಡಗಿ, ಮಲ್ಲಿಕಾರ್ಜುನ ಗಿಡಮಲ್ಲಪ್ಪಗೋಳ, ಅರುಣಾ ಮುಸಳೆ, ಪ್ರಕಾಶ ಹುಲಿಗೊಪ್ಪ ಇತರರಿದ್ದರು.