

ತಾವರಗೇರಾ: ಪಟ್ಟಣದ ಪಂಚಾಕ್ಷರಿ ಸಮುದಾಯ ಭವನದಲ್ಲಿ ಶ್ರಾವಣ ಮಾಸದಲ್ಲಿ ಆರಂಭಗೊಂಡಿದ್ದ ಶ್ರೀ ಶರಣ ಬಸವೇಶ್ವರ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮ ಬುಧವಾರ ಜರುಗಿತು.
ಇದನ್ನೂ ಓದಿ: ಕರಕನಳ್ಳಿಯಲ್ಲಿ ಶ್ರಾವಣ ಮಾಸದ ಪುರಾಣ ಮಹಾಮಂಗಲ
ಬೆಳಗ್ಗೆ ಅಲಂಕೃತ ವಾಹನದಲ್ಲಿ ಶ್ರೀ ಶರಣ ಬಸವೇಶ್ವರ ಭಾವಚಿತ್ರ ಹಾಗೂ ಶ್ರೀ ವೀರಭದ್ರೇಶ್ವರ ಬೆಳ್ಳಿ ಮೂರ್ತಿಗಳನ್ನಿಟ್ಟು ಮೆರವಣಿಗೆ ಮಾಡಲಾಯಿತು. 101 ಕುಂಭ, ಕಳಶವನ್ನು ಮಹಿಳೆಯರು ಹೊತ್ತಿದ್ದರು.
ಶ್ರೀ ವೀರಭದ್ರೇಶ್ವರ ಭಜನಾ ಮಂಡಳಿ, ಪುರಾಣ ಸೇವಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಅಬ್ಬಿಗೇರಿ ಶ್ರೀ ಮಂಜುನಾಥ ಶಾಸ್ತ್ರಿ, ಸಹಾಯಕರಾಗಿ ಅಶೋಕ ಕುಮಾರ ಹಾಗೂ ಹನುಮಂತ ಕುಮಾರ ಪುರಾಣ ಪಠಣ ಮತ್ತು ಪ್ರವಚನ ಮಾಡಿದ್ದರು.
ಪುರಾಣ ಸಮಿತಿ ಪ್ರಮುಖರಾದ ಕರಡೆಪ್ಪ ನಾಲತವಾಡ, ಆದಪ್ಪ ನಾಲತವಾಡ, ಗುರುಮೂರ್ತಿಸ್ವಾಮಿ, ದೊಡ್ಡನಗೌಡ ಸರನಾಯ್ಕ, ಸಂಗನಗೌಡ ಸರನಾಯ್ಕ, ಅಮರೇಶ ಗಲಗಲಿ, ಉಮೇಶ ಸ್ವಾಮಿ ಇತರರಿದ್ದರು.