ತ್ಯಾಗಮಯಿ ಜೀವನ ನಡೆಸಿದವರು ಬಸವೇಶ್ವರರು

6 NRD 4
Published on

ನರಗುಂದ: ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ಕಲಬುರ್ಗಿ ಶರಣ ಬಸವೇಶ್ವರರು, ಜಗಜ್ಯೋತಿ ಬಸವಣ್ಣನವರು ಜೀವ ವೈವಿಧ್ಯದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ.ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಸುಕ್ಷೇತ್ರ ಕೊಣ್ಣೂರ ಚರಮೂರ್ತೆಶ್ವರ ವಿರಕ್ತಮಠದ ಡಾ.ಶಿವಾನಂದ ದೇವರ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಶ್ರೀ ಮಠದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರವಚನದಲ್ಲಿ ಆಶೀರ್ವಚನ ನೀಡಿದರು. ಸಹೋದರ, ದಾಯಾದಿಗಳ ಕಲಹದ ನಡುವೆಯೂ ಶ್ರೀ ಕಲಬುರ್ಗಿ ಶರಣ ಬಸವೇಶ್ವರರು ಸಾವಿರಾರು ಎಕರೆ ಬರಡು ಭೂಮಿಯನ್ನು ಫಲವತ್ತುಗೊಳಿಸಿ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದರು. ಶ್ರದ್ಧೆ, ಭಕ್ತಿಯಿಂದ ಭೂತಾಯಿಯ ಮೇಲೆ ನಂಬಿಕೆಯನ್ನಿಟ್ಟು ಬಿತ್ತನೆ ಮಾಡಿದ ಬೆಳೆಗಳನ್ನು ಸಕಲ ಜೀವರಾಶಿಗಳು ತಿಂದುಳಿದು ಇನ್ನುಳಿದವರಿಗೆ ದಕ್ಕುವಂತೆ ತ್ಯಾಗಮಯಿ ಜೀವನ ನಡೆಸಿದ್ದಾರೆ ಎಂದರು.

ಪ್ರವಚನದ ನಂತರ ಶ್ರೀ ಕಲಬುರಗಿ ಶರಣ ಬಸವೇಶ್ವರರ ಪುರಾಣ ಸನ್ನಿವೇಶದಂತೆ ಎತ್ತು, ಕುಂಟಿ, ರೆಂಟಿಯಿಂದ ಕಣದಲ್ಲಿ ಗ್ರಾಮದ ಪ್ರಮುಖ ರೈತರಿಂದ ಹಂತಿ ಪದಗಳನ್ನು ಹಾಡುತ್ತ ಜೋಳದ ರಾಶಿ ಮಾಡಲಾಯಿತು. ಗ್ರಾಮಸ್ಥರು ಹಿಂದಿನ ಕಾಲದ ಗತವೈಭವ ಕಣ್ತುಂಬಿಕೊಳ್ಳುವಂತ ವಿಶೇಷತೆಗೆ ಧಾರ್ವಿುಕ ಕಾರ್ಯಕ್ರಮ ಸಾಕ್ಷಿಯಾಯಿತು.

ಡಾ.ಶಿವಕುಮಾರ ಶ್ರೀಗಳು, ಡಾ.ಶಿವಾನಂದ ಶ್ರೀಗಳು, ಸಂಗೀತಗಾರ ಹುಚ್ಚಯ್ಯ ಹಿರೇಮಠ, ತಬಲಾ ವಾದಕ ಬಸವರಾಜ ಹಿರೇಮಠ, ಕೆಂಚಪ್ಪ ಖ್ಯಾಡದ, ಯಲ್ಲಪ್ಪ ಖ್ಯಾಡದ, ರಾಜುಗೌಡ ಕೆಂಚನಗೌಡ್ರ, ಇಸಾಕ ಮಸೂತಿಮನಿ, ರಾಮನಗೌಡ ಶಿರಿಯಪ್ಪಗೌಡ್ರ, ಎಸ್.ಬಿ. ಯಲ್ಲಪ್ಪಗೌಡ್ರ, ಪರಪ್ಪ ಸಾಹುಕಾರ, ಮಲ್ಲಿಕಾರ್ಜುನ ಕರೆಪ್ಪನವರ, ಸಾಲಿಗೌಡ್ರ, ಬಸನಗೌಡ ಬಂಗಡಿ, ನಾಗಪ್ಪ ಚೌಡರಡ್ಡಿ, ಮೌನೇಶಗೌಡ್ರ, ಶಿವನಗೌಡ್ರ, ಅಪ್ಪಣಗೌಡ್ರ, ಅನಸುಯಾ ಕಣಬೂರ, ಶ್ರೀದೇವಿ ಮಣ್ಣೂರಮಠ, ಕಲಾವತಿ, ಬಸಯ್ಯ ಹಿರೇಮಠ, ಚೆನ್ನಯ್ಯ ಹಿರೇಮಠ, ಉಮೇಶ ಮರ್ಚಕ್ಕನವರ, ಭೀಮಸಿ, ಇತರರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ: ಮೇ 7 ರಂದು ಬೆಳಗ್ಗೆ 8 ಗಂಟೆಗೆ ಶ್ರೀಮಠದ ಆವರಣದಲ್ಲಿ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳಿಂದ ಷಟ್​ಸ್ಥಲ ಧ್ವಜಾರೋಹಣ. ಸಂಜೆ 6.30ಕ್ಕೆ ಅಸಿ-ಕೃಷಿ-ಋಷಿ ಚಿಂತನ, ಪುರಾಣ ಮಂಗಲ ಕಾರ್ಯಕ್ರಮ ಜರುಗುವುದು. ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ನಾಗನೂರ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಶ್ರೀಗಳು, ಅವರಾದಿ ಫಲಹಾರೇಶ್ವರ ಶ್ರೀಗಳು, ಭೈರನಹಟ್ಟಿ ಶಾಂತಲಿಂಗ ಶ್ರೀಗಳು, ನರಗುಂದ ವಿರಕ್ತಮಠದ ಶಿವಕುಮಾರ ಶ್ರೀಗಳು, ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡ್ರ, ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಶಾಂತಗೌಡ ಪಾಟೀಲ, ಡಾ.ಸಂಗಮೇಶ ಕೊಳ್ಳಿಯವರ, ಪ್ರಕಾಶಗೌಡ ತಿರಕನಗೌಡ್ರ, ಟಿ.ಬಿ.ಶಿರಿಯಪ್ಪಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಧಾರ್ವಿುಕ ಚಿಂತಕ ಶಿವಾನಂದ ಶೇಬಣ್ಣವರ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net