ಆದರ್ಶ ಸಮಾಜ ನಿರ್ಮಾಣಕ್ಕೆ ಬಸವಣ್ಣ ನಾಂದಿ

23 SARAG 1
ಸರಗೂರು ಪಟ್ಟಣದಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಅನೀಲ್ ಚಿಕ್ಕಮಾದು, ಗಣೇಶ ಪ್ರಸಾದ್, ಜಿ.ಟಿ. ದೇವೇಗೌಡ ಮತ್ತಿತರರಿ ದ್ದರು.
Published on

ಸರಗೂರು: ಸಮಾಜದ ಪರಿವರ್ತನೆಗಾಗಿ ಹೋರಾಡಿದ ಕಾಯಕಯೋಗಿ ಬಸವಣ್ಣನವರ ತತ್ವ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಪಟ್ಟಣದ ವಿವೇಕಾನಂದ ಆಸ್ಪತ್ರೆ ಹತ್ತಿರದ ಸಮಾಜದ ನಿವೇಶನದಲ್ಲಿ ಸೋಮವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸರಗೂರು ತಾಲೂಕು ಘಟಕದಿಂದ ನಡೆದ ಶ್ರೀ ಬಸವೇಶ್ವರ ಜಯಂತಿ ಮಹೋತ್ಸವ, ನೂತನ ಕಚೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವನ ಬಾಗೇವಾಡಿಯಲ್ಲಿ ಜನಿಸಿದ ಬಸವಣ್ಣ ಶಾಂತ ವಾತಾವರಣದಲ್ಲಿ ಬೆಳೆದು ರಾಜ ಬಿಜ್ಜುಳನ ಆಸ್ಥಾನದಲ್ಲಿ ಮಂತ್ರಿಯಾಗಿ ನವ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು. ಸಮಸಮಾಜಕ್ಕೆ ವಚನಗಳನ್ನು ಕೊಡುಗೆ ನೀಡಿದ ಅವರ ಬೋಧನೆಗಳು ಇಂದಿನ ಭಾರತಕ್ಕೂ ಅವಶ್ಯಕವಾಗಿದ್ದು, ಎಲ್ಲರೂ ಅನುಸರಿಸಿ, ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಜಾತಿಪದ್ಧತಿ ನಿರ್ಮೂಲನೆಗೆ ಪಣತೊಟ್ಟು ಸಕಲ ಜೀವಿಗಳಿಗೂ ಒಳಿತು ಬಯಸಿದ ಬಸವಣ್ಣನವರನ್ನು ಜಾತಿ, ಜಯಂತಿ ಆಚರಣೆ, ಪುಸ್ತಕಗಳಿಗೆ ಮಾತ್ರ ಸಿಮೀತಗೊಳಿಸಿರುವುದು ಬೇಸರದ ಸಂಗತಿ ಎಂದರು.

ಬಿಡುಗಲು ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ಮಾಡಿದರು. ಹಂಚೀಪುರ ಮಠದ ಚನ್ನಬಸವಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ ಬಸವೇಶ್ವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಗಾವಡಗೆರೆಯ ನಟರಾಜ ಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲ ಸ್ವಾಮೀಜಿ, ಪುರ ಮಠದ ಚಂದ್ರಶೇಖರ ಸ್ವಾಮೀಜಿ, ಬಿಚನಹಳ್ಳಿ ಮಠದ ನಾಗೇಂದ್ರಸ್ವಾಮೀಜಿ, ಮಾದಾಪುರ ಮಠದ ಮಲ್ಲಿಕಾರ್ಜುನಸ್ವಾಮೀಜಿ, ಹಂಚೀಪುರ ಮಠದ ಕಿರಿಯ ತೋಂಟದಾರ್ಯ ಸ್ವಾಮೀಜಿ, ಜಕ್ಕಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕಅನಿಲ್ ಚಿಕ್ಕಮಾದು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಗಣೇಶ್ ಪ್ರಸಾದ್, ಮಾಜಿ ಸಚಿವ ಎಂ.ಶಿವಣ್ಣ, ಮಹಾಸಭಾದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಮಾತನಾಡಿದರು. ಜೆಡಿಎಸ್ ಮುಖಂಡ ಜಯಪ್ರಕಾಶ್, ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ, ತಹಸೀಲ್ದಾರ್ ಮೋಹನಕುಮಾರಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ, ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಕಾರ್ಯದರ್ಶಿ ಬಸವರಾಜು, ಜಯಕುಮಾರ್, ಬಸವ ಬಳಗ ಅಧ್ಯಕ್ಷ ಹಂಚೀಪುರ ಗಣಪತಿ, ಬಸವ ಬಳಗದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ಮೊತ್ತ ಬಸವರಾಜು, ರುದ್ರಪ್ಪ, ಬಿ.ವಿ.ಬಸವರಾಜು, ಧನ್ಯ ಸತ್ಯಂದ್ರಮೂರ್ತಿ, ಅರ್ಜುನ್, ಡಿ.ಜಿ.ಶಿವರಾಜು, ಸಿ.ಕೆ.ಗಿರೀಶ್, ಮಂಜುನಾಥ, ಯುವ ಸಮಿತಿ ಅಧ್ಯಕ್ಷ ಲಂಕೆ ನಂದೀಶ್, ನಂಜಪ್ಪ, ಗಿರಿ ಕುಮಾರ್, ಮೋಹನಕುಮಾರ್, ಅಣ್ಣಯ್ಯ ಸ್ವಾಮಿ, ಕೆಂಡಗಣ್ಣಸ್ವಾಮಿ, ಶಿವಣ್ಣ, ಮಲ್ಲಿಕಾರ್ಜುನ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇಒ ಪ್ರೇಮ್ ಕುಮಾರ್, ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಪಿಎಸ್‌ಐ ಕಿರಣ್, ಅಶೋಕ್ ಇದ್ದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮಹಾಸಭಾದ ರಾಜ್ಯಾಧ್ಯಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹದೇವ ಬಿದರಿ ಅಭಿನಂದಿಸಿದರು. ಪಟ್ಟಣದ ಎಸ್‌ಕೆಜಿ ಕಾನ್ವೆಂಟ್ ಮಕ್ಕಳು ವಿವಿಧ ವೇಷಭೂಷಣ ಪ್ರದರ್ಶಿಸಿದರು. ಇದಕ್ಕೂ ಮುನ್ನ ಕೆಇಬಿ ಕಚೇರಿ ಮುಂಭಾಗದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net