ಜಿಲ್ಲಾಡಳಿತದಿಂದ ಬಸವೇಶ್ವರ ಜಯಂತಿ ಆಚರಣೆ *ವರ್ಣ,ಭೇದ ಅಸಮಾನತೆ ವಿರುದ್ಧ ಯುದ್ಧ ಮಾಡಿದವರು ಬಸವಣ್ಣ

raichur
raichur
Published on

 ರಾಯಚೂರು ಇಡೀ ದೇಶದಲ್ಲಿ ಪ್ರಭಾವ ಬೀರಿದ ವ್ಯಕ್ತಿ ಬಸವಣ್ಣ. ಶತಮಾನಗಳ ಹಿಂದೆ ಸಾಮಾಜಿಕ ಪರಿಸ್ಥಿತಿ ಸುಧಾರಿಸುವಲ್ಲಿ, ಅಸಮಾನತೆ, ಭೇದ ಭಾವ ತೊಡಗಿಸಲು, ವರ್ಣಾಧಾರಿತ ತಾರತಮ್ಯದ ವಿರುದ್ಧ ಬಸಣ್ಣನವರು ೧೨ನೇ ಶತಮಾನದಲ್ಲಿ ಯುದ್ಧ ಮಾಡಿದವರೆಂದು ಜಿಲ್ಲಾಽಕಾರಿ ನಿತೀಶ್ ಕೆ. ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವೀರಶೈವ ಸಮಾಜದಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ ಎಂಬುದನ್ನು ನಿವಾರಿಸಲು ಸಾಧ್ಯ. ಇನ್ನೂ ಸಾಕಷ್ಟು ಅಸಮಾನತೆ ಜÁರಿಯಲ್ಲಿದ್ದು ಅದನ್ನು ಎಲ್ಲರೂ ಸೇರಿ ತೊಲಗಿಸಲು ಶ್ರಮಿಸಬೇಕಿದೆ ಎಂದರು. ಶಿಕ್ಷಣ ಕೊಟ್ಟು ಉದ್ಯೋಗ ಸ್ವಾವಲಂಬನೆ ಸಾಽಸಲು ಸಾಧ್ಯ. ಪ್ರಜÁಪ್ರಭುತ್ವಕ್ಕೆ ಸ್ಪಷ್ಟ ಬುನಾದಿ ಹಾಕಿದವರು ಬಸವಣ್ಣನವರು. ಅವರ ಆದರ್ಶ, ತತ್ವ ನಿತ್ಯ ಬದುಕಿನಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಬಸವಣ್ಣನವರ ಕನಸು ನನಸಾಗಲು ಸಾಧ್ಯ ಎಂದರು.

ಸಂಸದ ಜಿ. ಕುಮಾರ ನಾಯಕ ಮಾತನಾಡಿ, ರಾಜ್ಯದ ಸಾಂಸ್ಕೃತಿನ ನಾಯಕ ಬಸವಣ್ಣ. ಅವರ ಸಂದೇಶ ಮೇಲುಕು ಹಾಕುವುದರ ಜತೆಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ಅವಲೋಕ ಮಾಡುತ್ತಿರುತ್ತೇವೆ. ದೇಶದಲ್ಲಿ ಉಗ್ರರ ದಾಳಿ ನಡೆದಿರುವಂತ ಸನ್ನಿವೇಶದಲ್ಲಿ ಜಯಂತಿ ಆಚರಿಸುತ್ತಿದ್ದೇವೆ. ಇಂತ ಘಟನೆಗಳಿಗೆ ಬಸವಣ್ಣನವರ ಸಂದೇಶಗಳೇ ಪರಿಹಾರ. ಮಹಾ ಮಾನವತವಾದದ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯ ಮನುಷ್ಯರಲ್ಲಿ ಸೌಹಾರ್ದತೆ ಇರಬೇಕು.

ಹಣ ಜÁತಿ ಧರ್ಮಗಳಿಂದ ಅಂತರ ಹೆಚ್ಚಾಗುತ್ತಿದೆ. ಅದರ ವಿರುದ್ಧ ಬಸವಣ್ಣನವರು ಹೇಳಿz್ದÁರೆ. ಸಾಮಾನ್ಯರು ಕೂಡ ಬಸವಣ್ಣನವರ ವಚನಗಳ ಹೇಳುವ ರೀತಿ ರಚಿಸಿರುವುದು ಹೆಮ್ಮೆಯ ವಿಚಾರವಾಗಿದೆ.

ನಮ್ಮೊಳಗೆ ಸಾಕಷ್ಟು ವ್ಯಾತ್ಯಾಸ, ತಳಮಳ ಇದೆ. ಇದನ್ನು ನೋಡಿದಾಗ ಮನೆಯೊಳಗೆ ಮನೆಯೊಡೆಯ ಇz್ದÁನೋ ಇಲ್ಲವೋ ಎನಿಸುತ್ತದೆ. ಅವರ ಸಾತ್ವಿಕ ಸಂದೇಶದ ಜತೆಗೆ ಸಾಹಿತ್ಯ ಸಂದೇಶವೂ ಬಹಳ ಮುಖ್ಯವಾಗಿದೆ ಎಂದರು.

ಕಲಬುರಗಿಯ ಶರಣ ಸಾಹಿತಿ ಮಹಾಂತೇಶ್ ಎಸ್.ಕುಂಬಾರ ಹೂವಿನಹಳ್ಳಿ ವಿಶೇಷ ಉಪನ್ಯಾಸ ನೀಡಿ, ಬಸವಣ್ಷನವರ ಸಂದೇಶಗಳನ್ನು ಜಗತ್ತಿಗೆ ಪಸರಿಸಬೇಕಾದ ಕೆಲಸ ಆಗಬೇಕಿದೆ. ಬಸವಣ್ಣನವರು ನೀಡಿದ ಈ ಧರ್ಮವನ್ನು ಗುರುತಿಸುವ ಕೆಲಸ ಆಗಬೇಕಿದೆ. ಗುರು ಬಸವಾದಿ ಶರಣರನ್ನು ನೆನಪು ಮಾಡಿಕೊಳ್ಳಬೇಕಾದರೆ, ಸಂಪ್ರದಾಯ ಸ್ಮರಿಸಬೇಕಿದೆ. ಪ್ರತಿ ಧರ್ಮಕ್ಕೂ ವಾರಸುದಾರರಿz್ದÁರೆ. ಧರ್ಮದ ಆಚಾರ ವಿಚಾರಗಳನ್ನು ಜÁರಿಗೆ ತರುವ ಕೆಲಸ ಆಗಬೇಕಿದೆ ಎಂದರು.

ಜÁತಿ ಸಂಕೋಲೆಗಳನ್ನು ಕಳಚಲು ಮೇಲು ಕೀಳು ವ್ಯವಸ್ಥೆ ಸುಧಾರಿಸಲು ಶ್ರಮಿಸಿದವರಲ್ಲಿ ಬಸವಣ್ಣನವರು ಪ್ರಮುಖರು. ಬಸವಣ್ಣನವರು ನೀಡಿದ್ದು ರಾಷ್ಟçಧರ್ಮವಲ್ಲ ವಿಶ್ವಧರ್ಮವಾಗಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಧರ್ಮ ಹುಟ್ಟು ಹಾಕಿz್ದÁರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶಿವರಾಜ ಪಾಟೀಲï ಮಾತನಾಡಿ, ನಾವು ಶಾಲಾ ದಿನಗಳಿಂದ ಬಸವಣ್ಣನ ಆರಾಧನೆ ಮಾಡಲಾಗುತ್ತಿದ್ದೇವೆ. ೧೨ನೇ ಶತಮಾನದಲ್ಲಿ ಎಲ್ಲ ಸಮಾಜವನ್ನು ಒಗ್ಗೂಡಿಸುವ ಕೆಲಸ ಬಸವಣ್ಣನವರು ಮಾಡಿz್ದÁರೆ. ನಮ್ಮ ಲಿಂಗಾಯತ ಸಮುದಾಯವು ದೇಶದ ಎಲ್ಲ ಸಮುದಾಯಗಳನ್ನು ಅಪ್ಪಿಕೊಕೊಳ್ಳುವ ಸ್ಥಾನದಲ್ಲಿ ಮೊದಲ ಸ್ಥಾನ ಪಡೆದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರಿಂದ ನಮ್ಮ ಸಮಾಜವನ್ನು ಹೊತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ ಇದರಿಂದ ಯುವ ಜನಾಂಗದಲ್ಲಿ ಆತಂಕ ಎದುರಾಗಿದೆ. ಅದರಿಂದ ನಾವು ಜÁಗೃತರಾಗಬೇಕು. ಯಾರು ಯಾವುದೇ ಷಡ್ಯಂತ್ರ ಮಾಡಿದರು ನಮ್ಮನ್ನು ಯಾರು ಕುಗ್ಗಿಸಲು ಸಾಧ್ಯವಿಲ್ಲ. ಈ ರೀತಿಯಾಗಿ ನಡೆದರೆ ಉಗ್ರ ಹೋರಾಟ ಮಾಡಲು ಲಿಂಗಾಯತ ಸಮುದಾಯ ಎದುರುವುದಿಲ್ಲ ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಿಕ್ಕಸೂಗೂರಿನ ಚೌಕಿಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ವೀರಶೈವ ಸಮಾಜದ ಜಿ¯್ಲÁಧ್ಯಕ್ಷ ಶರಣಭೂಪಾಲ ನಾಡಗೌಡ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲï ಮಿಜÁðಪುರ, ಬಸವಕೇಂದ್ರದ ಅಧ್ಯಕ್ಷ ರಾಚನಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಹರೀಶ, ಜÁಗೃತಿ ಲಿಂಗಾಯತ ಮಹಾಸಭಾದ ಅಧ್ಯಕ್ಷ ಜೆ.ಬಸವರಾಜ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net