ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಕಾರ್ಕಹಳ್ಳಿಯ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮತ್ತು ಬಿಇಟಿ ಟ್ರಸ್ಟ್ ಸಿಇಒ ಆಶಯ್ ಮಧು ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಕಾರ್ಕಹಳ್ಳಿಯ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮತ್ತು ಬಿಇಟಿ ಟ್ರಸ್ಟ್ ಸಿಇಒ ಆಶಯ್ ಮಧು ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
Published on

ಕೆ.ಎಂ.ದೊಡ್ಡಿ: ಸಮೀಪದ ಕಾರ್ಕಹಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು.

ಶ್ರೀ ಬಸವೇಶ್ವರ ಸ್ವಾಮಿಯ ಬಂಡಿ ಉತ್ಸವ, ರಾತ್ರಿ ಅಗ್ನಿಕೊಂಡ, ಕರಗ ಬಾಯಿ ಬೀಗ ಹಾಗೂ ಚಿಕ್ಕರಸಿಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ, ತೊರೆ ಬೊಮ್ಮನಹಳ್ಳಿಯ ಶ್ರೀ ಪಟ್ಟಲದಮ್ಮ ಮತ್ತು ಕಾರ್ಕಹಳ್ಳಿ ಬಸವೇಶ್ವರಸ್ವಾಮಿ ದೇವರುಗಳ ಉತ್ಸವ ವೈಭವದಿಂದ ನಡೆಯಿತು.

ಶ್ರೀ ಕ್ಷೇತ್ರದ ಪವಾಡ ಬಸವಪ್ಪನನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಈ ವೇಳೆ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಬಸಪ್ಪ ಮುಂದಾಳತ್ವ ವಹಿಸಿಕೊಂಡಿತ್ತು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಕುಟುಂಬ ಸಮೇತ ಆಗಮಿಸಿ ಕಾರ್ಕಹಳ್ಳಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮಧು ಜಿ.ಮಾದೇಗೌಡ ಮತ್ತು ಪುತ್ರ ಆಶಯ್ ಮಧು ಅವರನ್ನು ಅಭಿನಂದಿಸಿದರು.

ಬಿಂಧು ಮಧು ಮಾದೇಗೌಡ, ಬೃಂದಾ ಆಶಯ್ ಸೇರಿದಂತೆ ಹಲವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವಪ್ಪನ ಆರ್ಶೀವಾದ ಪಡೆದರು. ಶ್ರೀ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net