ಬಸವೇಶ್ವರ ಮೂರ್ತಿ ಮೆರವಣಿಗೆ

30 KNK 04
ಕನಕಗಿರಿ ರಾಜಬೀದಿಯಲ್ಲಿ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು.
Published on

ಕನಕಗಿರಿ: ಇಲ್ಲಿನ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಆಶ್ರಯದಲ್ಲಿ ಜಗಜ್ಯೋತಿ ಬಸವೇಶ್ವರ ಅವರ 892ನೇ ಜಯಂತಿ ನಿಮಿತ್ತ ಬಸವೇಶ್ವರ ಮೂರ್ತಿ ಹಾಗೂ ಎತ್ತುಗಳ ಮೆರವಣಿಗೆ ಬುಧವಾರ ಸಂಜೆ ಸಡಗರ, ಸಂಭ್ರಮದಿಂದ ನಡೆಯಿತು. ಮೆರವಣಿಗೆಗೆ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ. ಚನ್ನಮಲ್ಲಸ್ವಾಮೀಜಿ ಚಾಲನೆ ನೀಡಿದರು.

ರೈತರು ತಮ್ಮ್ಮ ಎತ್ತುಗಳನ್ನು ಅಲಂಕಾರ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಜಬೀದಿಯ ಮೂಲಕ ಆರಂಭವಾದ ಮೆರವಣಿಗೆಗೆ ಹಳೆಯ ಪೊಲೀಸ್ ಠಾಣೆ, ನಾಯಕ, ಗೌಡ್ರ ಓಣಿಯ ಮೂಲಕ ಸುವರ್ಣಗಿರಿ ಸಂಸ್ಥಾನ ಮಠಕ್ಕೆ ತಲುಪಿತು. ಮಹಿಳೆಯರು ಕಳಸ, ವಚನ ಗಾಯನ ಭಾಜಾ ಭಜಂತ್ರಿ ಮೆರವಣಿಗೆಗೆ ಕಳೆ ತಂದವು.

ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ರ, ಕಾರ್ಯದರ್ಶಿ ಪ್ರಶಾಂತ ಪ್ರಭುಶೆಟ್ಟರ್, ಪ.ಪಂ.ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ಅಭಿಷೇಕ್, ಸುರೇಶ ಗುಗ್ಗಳಶೆಟ್ರು, ಶೇಷಪ್ಪ ಪೂಜಾರ್, ಪ್ರಮುಖರಾದ ಪ್ರಕಾಶ ಹಾದಿಮನಿ, ಮಹಾಂತೇಶ ಸಜ್ಜನ, ವೀರೇಶಪ್ಪ ಸಮಗಂಡಿ, ಶರಣಬಸಪ್ಪ ಭತ್ತದ, ವಾಗೀಶ ಹಿರೇಮಠ, ರುದ್ರಮುನಿ ಪ್ರಭುಶೆಟ್ಟರ್, ವೀರೇಶ ಕಡಿ, ನಾಗರಾಜ ಬೊಂದಾಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net