ಬಸವೇಶ್ವರ ಮೂರ್ತಿ ಅದ್ದೂರಿ ಮೆರವಣಿಗೆ

31 GJD 3 MERAVANIGE
Published on

ಗಜೇಂದ್ರಗಡ: ಪಟ್ಟಣದ ಬೂದಿಹಾಳ ಓಣಿಯ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ನೂತನವಾಗಿ ಕಳಸಾರೋಹಣ ಹಾಗೂ ನೂತನ ಬಸವೇಶ್ವರ ಮೂರ್ತಿಯ ಮೆರವಣಿಗೆಯು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.

ಕುಷ್ಟಗಿ ರಸ್ತೆಯ ಹಿರೇದುರ್ಗಾದೇವಿ ದೇವಸ್ಥಾನದಿಂದ ಆರಂಭಗೊಂಡ ಕಳಸ ಹಾಗೂ ಬಸವೇಶ್ವರ ಮೂರ್ತಿ ಮೆರವಣಿಗೆಯು ವಿವಿಧ ವಾದ್ಯ ಮೇಳಗಳೊಂದಿಗೆ 300ಕ್ಕೂ ಅಧಿಕ ಸುಮಂಗಲೆಯರಿಂದ ಕುಂಭ ಮೆರವಣಿಗೆ ಜರುಗಿತು. ಪುರಸಭೆ, ಮೈಸೂರಮಠ, ಬಸವೇಶ್ವರ ವೃತ್ತ, ಮೌಲಾಲಿ ಮಸೂದಿ ಮಾರ್ಗವಾಗಿ ಸಂಚರಿಸಿ ಬೂದಿಹಾಳ ಅವರ ಓಣಿಯ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತಲುಪಿತು.

ಮಾಜಿ ಸಚಿವ ಕಳಕಪ್ಪ ಬಂಡಿ, ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ, ಅಶೋಕ ವನ್ನಾಲ, ಭಾಸ್ಕರಸಾ ರಾಯಬಾಗಿ, ಪ್ರಕಾಶ ಕಾರಡಗಿಮಠ, ಚಂದ್ರು ಕುಷ್ಟಗಿ, ರಮೇಶ ಕುಷ್ಟಗಿ, ಸುಲೇಮಾನ ಮೋಮಿನ, ಬಸವರಾಜ ಬಂಕದ, ಮುತ್ತಣ್ಣ ಚಟ್ಟೇರ, ಮುದಿಯಪ್ಪ ಮುಧೋಳ, ಆನಂದ ಅಂಗಡಿ, ಆಕಾಶ ಕಾರಡಗಿಮಠ, ಮಲ್ಲು ಶಾಸ್ತ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net