

ಸವಣೂರ: ತಾಲೂಕಿನ ಜಲ್ಲಾಪೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಏ. 5ರಿಂದ ಏ. 7ರವರೆಗೆ ಜರುಗಲಿದೆ.
ಏ. 5ರಂದು ಅಭಿಷೇಕ ಹಾಗೂ ವಿವಿಧ ಧಾರ್ವಿುಕ ಕೈಂಕರ್ಯ ಹಾಗೂ ಸಂಜೆ ಹೂವಿನತೇರು ಜರುಗಲಿದೆ. ಏ. 6ರಂದು ಅಭಿಷೇಕ ಹಾಗೂ ವಿವಿಧ ಧಾರ್ವಿುಕ ಕೈಂಕರ್ಯ, ಭಕ್ತರಿಂದ ಹರಕೆ ಕಾರ್ಯ ಜರುಗಲಿದೆ. ಸಂಜೆ ವಿವಿಧ ವಾದ್ಯ ವೈಭವಗಳೊಂದಿಗೆ ಬಸವೇಶ್ವರ ದೇವರ ರಥೋತ್ಸವ ಜರುಗಲಿದೆ.
ಏ. 7ರಂದು ವಿವಿಧ ಧಾರ್ವಿುಕ ಕಾರ್ಯಗಳೊಂದಿಗೆ ಭಕ್ತರು ಪಾದಗಟ್ಟೆಗೆ ಕಾಯಿ ಒಡೆಯುವ ಕಾರ್ಯ ಹಾಗೂ ಸಂಜೆ ಕಡುಬಿನ ಕಾಳಗ ಜರುಗಲಿದೆ.