ಬಸವೇಶ್ವರ ಏತ ನೀರಾವರಿ ಶೀಘ್ರ ಪೂರ್ಣ

3
Published on

ಸಂಬರಗಿ: ಈ ಭಾಗದ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ವಿಳಂಬವಾಗಿದ್ದು, ಗುತ್ತಿಗೆದಾರನನ್ನು ಬದಲಿಸಿ ಯೋಜನೆ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಟ್ಟಡ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಚಿವನಾಗಿದ್ದಾಗ ರೈತರಿಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಿ ಅನುಕೂಲ ಕಲ್ಪಿಸಿದ್ದೇನೆ. ಕ್ಷೇತ್ರವನ್ನು ಹಸಿರು ಕ್ರಾಂತಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.

ಶಾಸಕ ರಾಜು ಕಾಗೆ ಹಾಗೂ ಸಂಘದ ಉಪಾಧ್ಯಕ್ಷ ಅಣ್ಣಾಸಾಹೇಬ ಮೀಸಳ ಮಾತನಾಡಿದರು. ಸಾನ್ನಿಧ್ಯ ವಹಿಸಿ ಬೀರಲಿಂಗೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ವಿಲಾಸ ಟೋಣೆ, ಮಾಜಿ ಜಿಪಂ ಸದಸ್ಯ ವಿನಾಯಕ ಬಾಗಡಿ, ಉತ್ತಮ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ದಳವಾಯಿ, ಜಂಬಗಿ ಗ್ರಾಪಂ ಅಧ್ಯಕ್ಷ ರವಿ ವಾಗಮಾರೆ, ಶಿರೂರ ಗ್ರಾಪಂ ಅಧ್ಯಕ್ಷ ಬಾಳು ಹಜಾರೆ, ಪಿಕೆಪಿಎಸ್ ಅಧ್ಯಕ್ಷ ಸಿದ್ಧನಾಥ ಅವಳಿಕರ, ರೇಖಾ ಪುಂಜಪ್ಪಗೋಳ, ಗುಳಪ್ಪ ಜತ್ತಿ, ಶಿವಾನಂದ ಗೋಲಬಾವಿ, ಸಿದ್ಧರಾಯ ತೇಲಿ, ಬಸವರಾಜ ಅಂಗಡಿ, ಸಂಘದ ನಿರ್ದೇಶಕರಾದ ತುಕಾರಾಮ ಶೇಳಕೆ, ಧರ್ಮು ನರೋಟಿ, ಟೋಪಾಜಿ ಅವಳೇಕರ, ದೀಪಕ ಮಾನೆ, ಪರಶುರಾಮ ನಾಟಿಕರ, ಸುಷ್ಮಾ ದೇವಮಾಣಿ, ಗೌರಕ್ಕ ಗಸ್ತಿ, ಸಾವಿತ್ರಿ ಅವಳೇಕರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಕೂಡಿಬಾ ಮಿಸಾಳ, ಸುಕದೇವ ಕಂಠಿಕರ ಇತರರಿದ್ದರು. 19-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net