ಗಜೇಂದ್ರಗಡ: ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ.

IMG-20241114-WA0252
Published on
ಗಜೇಂದ್ರಗಡ: ತಾಲೂಕಿನ ರಾಜೂರಿನ ಶ್ರೀ ಬಸವೇಶ್ವರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೆ. ಬಿ. ಬೆನಕನವಾರಿ, ಮುಖ್ಯ ಅತಿಥಿಗಳಾದ ಶ್ರೀ ಬಸವರಾಜ ತೇಜಿ ಹಾಗೂ ಶ್ರೀ ಸಕ್ರಪ್ಪ ತಳವಾರ ರವರು ಪಂಡಿತ ಜವಾಹರ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
 ಕೆ . ಬಿ. ಬೆನಕನವಾರಿ ರವರು ಮಕ್ಕಳ ನೆಚ್ಚಿನ ಚಾಚಾ ಜವಾಹರ ಲಾಲ್ ನೆಹರರೂ ರವರು ನಾಳೆ ನಿಮ್ಮದು ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಪ್ರಮುಖ ಮಹಾನ್ ನಾಯಕರಲ್ಲಿ ಇವರು ಒಬ್ಬರಾಗಿದ್ದಾರೆ, ದೇಶದ ಪ್ರಪ್ರಥಮ ಪ್ರಧಾನಿಯಾಗಿ ಇವರ ಜೀವನ ಆದರ್ಶಮಯವಾದದ್ದು. ಮಕ್ಕಳು ಪ್ರೀತಿಯಿಂದ ಇವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯವಾಗಿತ್ತು, ಆದ್ದರಿಂದ ಅವರ ಸವಿ ನೆನಪಿಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.
ಮುಖ್ಯಅತಿಥಿಗಳಾದ ಶ್ರೀ ಬಸವರಾಜ ತೇಜಿ ರವರು ಮಕ್ಕಳಲ್ಲಿ ಜೀವನೋತ್ಸಾಹ ಮೂಡಿಸುವುದು ಮಕ್ಕಳ ದಿನಾಚರಣೆಯ ಉದ್ದೇಶ. ಮಕ್ಕಳ ಭವಿಷ್ಯ ಉತ್ತಮವಾಗಲು ಸರಿಯಾದ ಮಾರ್ಗದರ್ಶನ ಅಗತ್ಯ, ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿಗಳಾದ ಶ್ರೀ ಸಕ್ರಪ್ಪ ತಳವಾರ ರವರು ಮಕ್ಕಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸನ್ನಡತೆ ರೂಡಿಸಿಕೊಳ್ಳಬೇಕು. ಮಕ್ಕಳನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸಿ ಸಮಾಜಕ್ಕೆ ಅರ್ಪಿಸುವ ಕಾರ್ಯದಲ್ಲಿ ಪೋಷಕರು ಮತ್ತು ಶಿಕ್ಷಕರು ಬದ್ಧತೆಯನ್ನು ಹೊಂದಿರಬೇಕು ಎಂದರು.
ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಜಿ. ಜಿ. ವ್ಯಾಪಾರಿ ಹಾಗೂ ಶ್ರೀಮತಿ ಎಸ್. ಕೆ. ಬೆನಕನವರಿ ರವರು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು. ಹಾಗೂ ವಿದ್ಯಾರ್ಥಿಗಳಾದ ಕು. ಪ್ರತಿಕ್ಷಾ ತೇಜಿ, ಕು. ರೇಣುಕಾ ಕಾಡದ, ಕು. ಪುಟ್ಟರಾಜ ಕಾಡದ, ಕು. ದ್ಯಾಮಣ್ಣ ಕಾಡದ ಹಾಗೂ ಕು. ತನ್ವಿತಾ ಗುರಿಕಾರ ರವರು ಮಕ್ಕಳ ದಿನಾಚರಣೆಯ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕು. ಪ್ರವೀಣ ಕತ್ತಿಯವರ ನಿರೂಪಿಸಿದರು, ಕು. ಅನಿತಾ ರಾಠೋಡ  ಸ್ವಾಗತಿಸಿದರು ಹಾಗೂ ಕು. ಕೃಷ್ಣ ವ್ಯಾಪಾರಿ ವಂದಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರು, ಅತಿಥಿಗಳು, ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net