ಅಖಾಡದಲ್ಲಿ ಪೈಲವಾನರ ಸಾಹಸ ಪ್ರದರ್ಶನ

Basaveshwar Jatra Festival, Basavanbagewadi, Akhara, Pailwana,
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ (ಮೂಲನಂದೀಶ್ವರ) ಜಾತ್ರಾ ಮಹೋತ್ಸವ ನಿಮಿತ್ತ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕಸರತ್ತಿನ ಪ್ರದರ್ಶನ ವೀಕ್ಷಿಸಲು ಆಗಮಿಸಿದ ಜನಸ್ತೋಮ.
Published on

ಬಸವನಬಾಗೇವಾಡಿ: ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಟ್ಟಿಗಳು ಕಸರತ್ತಿನ ಸ್ಪರ್ಧೆ ಹಾಗೂ ಕುಸ್ತಿ ಅಖಾಡದಲ್ಲಿ ಪೈಲವಾನರು ತಮ್ಮ ಸಾಹಸ ಪ್ರದರ್ಶಿಸಿ ನಗದು ಬಹುಮಾನ ಹಾಗೂ ಬೆಳ್ಳಿ ಖಡ್ಗ ಪಡೆದುಕೊಂಡರು.

ಬಸವೇಶ್ವರ (ಮೂಲನಂದೀಶ್ವರ) ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಪಟ್ಟಣದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕಸರತ್ತಿನ ಪ್ರದರ್ಶನ ಹಾಗೂ ತಾಳಿಕೋಟೆ ರಸ್ತೆಯ ಚಾಣಕ್ಯ ಶಿಶುವಿಹಾರ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ಕುಸ್ತಿ ಅಕಾಡದಲ್ಲಿ 800ಕ್ಕೂ ಹೆಚ್ಚು ಸ್ಪರ್ಧಾಗಳು ಭಾಗವಹಿಸಿದ್ದರು.

ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆಯಲ್ಲಿ ಜತ್ತ ತಾಲೂಕಿನ ಆಸಂಗಿಯ ಅಪಜಲ್‌ಕಾನ್ ಮುಜಾವರ ಪ್ರಥಮ, ಕಲಮಡಿಯ ರಫೀಕ್ ಮುಲ್ಲಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಂಗ್ರಾಣಿ ಕಲ್ಲು ವತ್ತಿ ಎತ್ತುವ ಸ್ಪರ್ಧೆಯಲ್ಲಿ ಶಿವಾನಂದ ಜಾಡರ ಪ್ರಥಮ, ಬಾಗಲಕೋಟೆಯ ಗುಳೇದಗುಡ್ಡದ ವಿಠ್ಠಲ ಮನ್ನಿಕಟ್ಟಿ ದ್ವಿತೀಯ ಸ್ಥಾನ, ಕುಂಟೋಜಿಯ ಮನೋಜ ತಳವಾರ ತೃತೀಯ ಸ್ಥಾನ ಪಡೆದಿದ್ದಾರೆ.

ಗುಂಡು ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪುರದ ಶಿವಲಿಂಗಪ್ಪ ಶಿವೂರ ಪ್ರಥಮ, ನಾಗಠಾಣದ ಭೀರಪ್ಪ ಪೂಜಾರಿ ದ್ವಿತೀಯ, ಹಳ್ಳೂರದ ಚಂದ್ರಶೇಖರ ಯಾಳವಾರ ತೃತೀಯ ಸ್ಥಾನ ಪಡೆದಿದ್ದಾರೆ. ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಬಿದರಕುಂದಿಯ ಮಲ್ಲು ಹನುಮಸಾಗರ ಪ್ರಥಮ, ಸಂತೋಷ ಇಟಗಿ ದ್ವಿತೀಯ, ಪ್ರವೀಣ ಶಿವೂರ ತೃತೀಯ ಸ್ಥಾನ ಪಡೆದಿದ್ದಾರೆ.

ಜೋಳದ ಚೀಲ ಎತ್ತುವ ಸ್ಪರ್ಧೆಯಲ್ಲಿ ಶ್ರೀಕಾಂತ ನಾಯಕ ಪ್ರಥಮ, ಭೀಮಪ್ಪ ಬಳಬಟ್ಟಿ ದ್ವಿತೀಯ, ಕರೆಯಪ್ಪ ಹೊಸಮನಿ ತೃತೀಯ ಸ್ಥಾನ ಪಡೆದಿದ್ದಾರೆ. ಹಲ್ಲಿನಿಂದ ಹಾರಿ ಒಗೆಯುವ ಸ್ಪರ್ಧೆಯಲ್ಲಿ ರಮೇಶ ಪಾಟೀಲ ಪ್ರಥಮ, ಮಾಳಪ್ಪ ಪೂಜಾರಿ ದ್ವಿತೀಯ, ಶರಣಪ್ಪ ಬಿರಾದಾರ ತರತೀಯ ಸ್ಥಾನ ಪಡೆದಿದ್ದಾರೆ. ಗುನ್ನಾಪುರದ 16 ವರ್ಷದ ಬಾಲಕ ಬೀರಪ್ಪ ಪೂಜಾರಿ ಮೆಟನಾಲಿಗೆ ಮೇಲಿನಿಂದ ಚೀಲ ಎತ್ತುವ ಮೂಲಕ ಜನರ ಗಮನ ಸೆಳೆದನು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿ ಪಟು- ಪೈಲವಾನರು ಹಾಗೂ ಕಸರತ್ತಿನ ಜಟ್ಟಿಗಳಿಗೆ ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಶಿವಾನಂದ ಈರಕಾರ ಮುತ್ಯಾ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ.ಆದಿಗೊಂಡ, ಬಸವಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಅವರು ಬಹುಮಾನ ವಿತರಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ, ಸಂಗಣ್ಣ ಕಲ್ಲೂರ, ಸುಭಾಷ ಚಿಕ್ಕೊಂಡ, ದಯಾನಂದ ಜಾಲಗೇರಿ, ನಾಗರಾಜ ಗುಂದಗಿ, ಶಿವಯೋಗಿ ಒಡೆಯರ, ಸಂಗಪ್ಪ ಡಂಬಳ, ಮೇರಾಸಾಬ ಕೊರಬು, ನಿಂಗಯ್ಯ ಒಡೆಯರ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ತಹಸೀಲ್ದಾರ್ ಜೆ.ಎಸ್.ಚಿನವಾಲರ, ಬಸವರಾಜ ಕಳ್ಳಿ, ಶರಣು ಕೂಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net