ಬಸವಣ್ಣ ಮನಕುಲಕ್ಕೆ ಆರ್ಥಿಕ ಸಿದ್ಧಾಂತ ಬೋಧಿಸಿದ್ದರು: ಸಚಿವ ಎಚ್.ಕೆ. ಪಾಟೀಲ ಹೇಳಿದರು.

17GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಬಸವಣ್ಣ ಮಹಾನ್ ಮಾನವತಾವಾದಿ. ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿತು. ಬಸವಣ್ಣ ಅವರು ನೀಡಿದ ಸಂದೇಶಗಳನ್ನು ಇಂದು ನಾವು ಪಾಲನೆ ಮಾಡಬೇಕಿದೆ. ಅದೇ ಯೋಚನೆ ಹಿಂದೆ ಅವರ ಫೋಟೋ ಸರ್ಕಾರಿ ಕಚೇರಿಯಲ್ಲಿ ಅನಾವರಣ ಮಾಡಲಾಗುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಪೂರ್ವಪಿಠಿಕೆ, ಬಸವಣ್ಣ ಅವರ ಭಾವಚಿತ್ರವು ಸರ್ಕಾರಿ ಕಚೇರಿಯಲ್ಲಿ ಎಲ್ಲರಿಗೆ ಕಾಣಸಿಗುವುದರಿಂದ ಎಲ್ಲರಲ್ಲೂ ಜಾಗೃತಿ ಮೂಡುತ್ತದೆ. ಸಮ ಸಮಾಜ, ಸಂವಿಧಾನ ಆಶಯ ಜಾರಿಗೆ ಬಸವಣ್ಣ ಅವರ ಸಂದೇಶವೇ ಮೂಲ. ಆದರೆ, ಅವರ ವಿಚಾರಗಳನ್ನು ಭಾಷಣದ ವಸ್ತುಗಳನ್ನಾಗಿಸಿದ್ದೇವೆ. ಅವರ ಆಚಾರ, ವಿಚಾರ ಗಳನ್ನು ಪ್ರಚಾರ ಮಾಡುವ ಬದಲಾಗಿ ಅವರನ್ನೇ ಪ್ರಚಾರ ಮಾಡುತ್ತ ಅವರ ಸಂದೇಶ ಮರೆ ಮಾಚುವ ಕೆಲಸ ಮಾಡುತ್ತ ಅವಮಾನ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದ್ದರು.

ಬಸಣ್ಣನವರು ಮನಕುಲಕ್ಕೆ ಆರ್ಥಿಕ ಸಿದ್ಧಾಂತ ಬೋಧಿಸಿದ್ದರು. ಕಾರ್ಲ್ ಮಾರ್ಕ್ಸ್ ಗಿಂದ ಆರ್ಥಿಕ ಸಿದ್ದಾಂತ ಬಲ್ಲವರಾಗಿದ್ದರು. ಕಾಯಕ ಮತ್ತು ದಾಸೋಹ ಅವರ ಮೂಲ ಸಿದ್ದಾಂತ ಆಗಿತ್ತು. ಕಾಯಕಕ್ಕೆ ಜಯವಾಗಬೇಕು,  ಶ್ರಮಜೀವಿಗೆ ಜಯವಾಗಬೇಕು ಎಂಬ ಮೂಲ ಸಂದೇಶ ಅವರದ್ದಾಗಿತ್ತು ಎಂದರು.

ಬಸವಣ್ಣ ಅವರು ಕೇವಲ ಆಧ್ಯಾತ್ಮ ಎಂದು ನಂಬಿದ್ದೇವೆ. ಅಮೆರಿಕಾದಲ್ಲಿ ಕರಿಯರಿಗೆ, ಯುರೋಪನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. 

ಆದರೆ, 12 ನೇ ಶತಮಾನದಲ್ಲಿ ಅವರು ಸಮಾನತೆಯ ಹರಿಕಾರರಾಗಿ ಅನುಭವ ಮಂಟಪದಲ್ಲಿ ಎಲ್ಲರಿಗೂ ಅವಕಾಶ ಕೊಟ್ಟಿದ್ದರು. ಸಮಾಜದ ಶ್ರೇಣಿಕೃತ ವರ್ಗದಲ್ಲೂ ಸಮಾನತೆ ನೀಡುವ ಕಷ್ಟಕಾಲದಲ್ಲೂ ಸಮಾನತೆ, ಕಾಯಕ, ದಾಸೋಹ ಸಿದ್ದಾಂತದ ಹರಿಕಾರರು ಬಸವಣ್ಣನವರು. ಸಂವಿಧಾನ ವಿಚಾರಕ್ಕೆ, ಗಾಂಧಿಜಿ ವಿಚಾರಕ್ಕೆ, ಬಸವಣ್ಣನ ವಿಚಾರಕ್ಕೆ ಜನರು ಕೈಜೋಡಿಸಬೇಕು. ಅವರ ಹೆಜ್ಜೆಯಲ್ಲಿ ಸರ್ಕಾರ ನಟೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಯಲಲಿ ಅತೀ ಹೆಚ್ಚು ಅಂಕಗಳಿಸಿದ ಕಾರ್ಮಿಕ  ಮಕ್ಕಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಮಾಜಿ  ಜಿಪಂ ಅಧ್ಯಕ್ಷ ಸಿದ್ದು ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net