ಹಗ್ಗ ಜಗ್ಗಾಟದಲ್ಲಿ ಬಸವೇಶ್ವರ ಬಾಯ್ಸ ಫಸ್ಟ್

9sgr1
Published on

ಸಾಗರ: ತಾಲೂಕಿನ ಕರ್ಕಿಕೊಪ್ಪ ಶಾಲಾವರಣದಲ್ಲಿ ಶನಿವಾರ ಕರ್ಕಿಕೊಪ್ಪ ಫ್ರೆಂಡ್ಸ್ನಿಂದ ತಾಲೂಕು ಮಟ್ಟದ ಆರ್ಮಿಕಪ್ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಗುಡ್ಡೆಕೌತಿ ಬಸವೇಶ್ವರ ಬಾಯ್ಸ್(ಪ್ರಥಮ), ವರದಹಳ್ಳಿ ದುರ್ಗಾಂಬಾ ಬಾಯ್ಸ್(ದ್ವಿತೀಯ), ಸೆಟ್ಟಿಸರ ಅಣ್ಣಪ್ಪ ಫ್ರೆಂಡ್ಸ್(ತೃತೀಯ) ಬಹುಮಾನ ಪಡೆದರು. ಜಮ್ಮು-ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಚ್.ನಾಗೇಂದ್ರ ಹುಲಕೋಡು, ಮಾಜಿ ಯೋಧ ದಿನೇಶ್ ಜಿಗಳೆಮನೆ, ಭದ್ರಾವತಿ ಆರ್ಮಿ ಕ್ಯಾಂಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೇಷ್ಮಾ ಕುಮಾರಿ, ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ಕಿಕೊಪ್ಪ ಫ್ರೆಂಡ್ಸ್ ಸಂಸ್ಥೆಯ ಮಯೂರ, ನಾಗೇಂದ್ರ, ಸಚಿನ್, ಶ್ರೀಧರ್, ಮಹೇಶ್, ಮನೋಜ್, ಸುಧೀರ್, ಸಮರ್ಥ, ಮಂಜು, ಪ್ರಶಾಂತ್, ಜಯರಾಜ್, ಸಮರ್ಥ, ಅಭಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net