

ಶಿವಾನಂದ ಹಿರೇಮಠ ಗದಗ
ಸಂಸದ ಬಸವಾರಜ ಬೊಮ್ಮಾಮಿ ಅವರ ಕನಸಿನ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗಿದೆ. 2024 ಆಗಸ್ಟ್ ತಿಂಗಳಲ್ಲೇ ಮುಗಿಯಬೇಕಿದ್ದ ಈ ಯೋಜನೆ ಇನ್ನೂ ಶೇ. 40 ರಷ್ಟು ಕಾಮಗಾರಿ ಬಾಕಿ ಇದ್ದು ಇನ್ನೂ ಒಂದು ವರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸಿಎಂ ಆಗಿದ್ದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ 291 ಗ್ರಾಮಗಳಿಗೆ 600 ಕೋಟಿ ವೆಚ್ಚದಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಇನ್ನೂ ಹಲವಡೆ ಮುಖ್ಯ ಪೈಪ್ ಲೈನ್ ಅಳವಡಿಕೆ ಬಾಕಿ ಇದ್ದು, ಹಲವಡೆ ಉಪ ಪೈಪೈಲೈನ್ ಅಳವಡಿಕೆ ಬಾಕಿ ಇದೆ. ಗದಗ ಜಿಲ್ಲೆಯಲ್ಲಿ ಇನ್ನೂ 27 ಕಿಮೀ ಪೈಪ್ ಲೈನ್ ಅಳವಡಿಕೆ ಬಾಕಿ ಇದೆ.
ಗದಗ ಜಿಲ್ಲೆಯ ಗುಮ್ಮಗೋಳ ಗ್ರಾಮದ ಬಳಿ ಹಮ್ಮಗಿ ಬ್ಯಾರೇಜ್ನಲ್ಲಿ ಜಾಕ್ ವೆಲ್ ಅಳವಡಿಸುವ ಮೂಲ ಪಕ್ಕದ ಹಾವೇರಿ ಜಿಲ್ಲೆಯ 291 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ$್ಯದಿಂದ ಹಲವಡೆ ಕಾಮಗಾರಿ ಸಂರ್ಪೂಣ ಸ್ಥಗಿತಗೊಂಡಿದ್ದು, ಇನ್ನೂ ಕೆಲವೆಡೆ ಕಾಮಗಾರಿ ರ್ಪೂಣಗೊಂಡಿದ್ದರೂ ಅದು ಕೂಡಾ ಕಳಪೆಯಾಗಿದೆ. ಪೈಪ್ಲೈನ್ ಜೋಡಣೆ ಪರಿರ್ಪೂಣ ಆಗದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
36 ಎಂಎಲ್ಡಿ ನೀರಿನ ಪೂರೈಕೆ ಯೋಜನೆ:
ಗದಗ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿಮಿರ್ಸಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಜಲಾಶಯ ವ್ಯಾಪ್ತಿಯಲ್ಲಿ ನಿಮಿರ್ಸಲಾಗುವ ಜಾಕ್ ವೆಲ್ ನಿಂದ ಪಕ್ಕದ ಜಿಲ್ಲೆಯ ಹಾವೇರಿ, ಶಿಗ್ಗಾಂವ, ಸವಣೂರು ಹಾಗೂ ಹಾನಗಲ್ಲ ತಾಲೂಕುಗಳಿಗೆ ದಿನಕ್ಕೆ 36 ಎಂಎಲ್ಡಿ (ಮಿಲಿಯನ್ ಲೀಟರ್ ಪ್ರತಿದಿನ) ನೀರು ಎತ್ತುವಳಿ ಮಾಡಿ ಶುದ್ಧಿಕರಿಸಿ ಪೂರೈಸುವ ಯೋಜನೆ ಇದಾಗಿದೆ. 2020ರಲ್ಲಿ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. 2022 ರಲ್ಲಿಯೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು 2024 ರ ಆಗಸ್ಟ್ ವೇಳೆಗೆ ಯೋಜನೆ ರ್ಪೂಣ ಗೊಳ್ಳಬೇಕಾಗಿತ್ತು. ಆದರೆ 2025 ಆಗಸ್ಟ್ ಸಮೀಪಿಸುತ್ತಿದ್ದರೂ ಕಾಮಗಾರಿ ರ್ಪೂಣವಾಗಿಲ್ಲ. ಗುತ್ತಿಗೆ ಪಡೆದಿರುವ ಮೇಘಾ ಸಂಸ್ಥೆಯವರು ಮಾತ್ರ ಕಾಮಗಾರಿ ಪ್ರಗತಿಯ ಬಗ್ಗೆ ಗಮನ ಹರಿಸದೇ ಇರುವ ಹಿನ್ನೆಲೆಯಲ್ಲಿ ಶಾಶ್ವತ ನೀರಿನ ಸಮಸ್ಯೆ ನಿವಾರಣೆ ಆಗುತ್ತಿಲ್ಲ.
ಅಧಿಕ ವೆಚ್ಚ:
ಕ್ಷೇತ್ರದ ಮೇಲಿನ ಇಚ್ಚಾಶಕ್ತಿಯಿಂದ ಸಿಎಂ ಆಗಿದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಒಟ್ಟು 600 ಕೋಟಿ ವೆಚ್ಚದ ಯೋಜನೆಗೆ ನಿಶಾನೆ ತೋರಿದ್ದರು. ಗದಗ ಹಾವೇರಿ ಜಿಲ್ಲೆಯ ಮುಖ್ಯ, ಉಪ ಪೈಪ್ ಲೈನ್ ಸೇರಿ ಒಟ್ಟು 900 ಕಿಮೀ ಪೈಪ್ಲೈನ್ ಅಳವಡಿಕೆ ಮಾಡಬೇಕಿದೆ. ಆದರೆ ಇದುವರೆಗೆ ಗದಗ ಹಾವೇರಿ ಸೇರಿ 670 ಕಿಮೀ ಮಾತ್ರ ರ್ಪೂಣಗೊಂಡಿದೆ. ಕಾಮಗಾರಿ ವಿಳಂಬದಿಂದಾಗಿ ವರ್ಷದಿಂದ ವರ್ಷಕ್ಕೆ ವೆಚ್ಚ ಹೆಚ್ಚಾಗುತ್ತಿದ್ದೆ. ಯೋಜನೆಯ ಪ್ರಾರಂಭಿಕ ಹಂತವಾಗಿ ಗದಗ ಜಿಲ್ಲೆಯಲ್ಲಿ 27 ಕಿಮೀ ಉದ್ದದ ಮುಖ್ಯ ನೀರು ಸಂಗ್ರಹ ಪೈಪ್ಲೈನ್ ಕಾಮಗಾರಿ ಬಾಕಿ ಉಳಿದಿದೆ.
ಕಳಪೆ ಅನುಮಾನ:
ಗದಗ ಜಿಲ್ಲೆಯ ತಂಗೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೊರವಲಯದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಗುತ್ತಿಗೆದಾರರು ಆತುರದಲ್ಲಿ ಪೈಪ್ ಜೋಡಣೆಗಳನ್ನು ಸಮಪರ್ಕವಾಗಿ ಮಾಡುತ್ತಿಲ್ಲ. ಬೃಹತ್ ನೀರು ಪೂರೈಕೆ ಮಾಡುವ ಪೈಪ್ಲೈನ್ಗಳ ಗುಣಮಟ್ಟ ಮತ್ತು ಅವುಗಳ ಅಳವಡಿಕೆಯ ವೇಳೆಯಲ್ಲಿ ಪಾಲಿಸಬೇಕಾದ ನಿಯಮಗಳು ಪಾಲನೆ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.
ಬಾಕ್ಸ್:
ಕಾಮಗಾರಿ ವಿಳಂಬ ಆಗಿರುವುದು ನಿಜ. ಹಲವು ರೈತರ ಜಮೀನುಗಳಲ್ಲಿಯೇ ಪೈಪ್ಲೈನ್ ಅಳವಡಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಥರ್ಡ್ ಪಾಟಿರ್ ನೇಮಿಸಲಾಗುತ್ತಿದೆ. ನಾವು ಕೂಡಾ ಪರಿಶೀಲನೆ ಮಾಡುತ್ತೇವೆ ಎಂದು ಹಾವೇರಿ ನೀರು ಸರಬರಾಜು ಇಲಾಖೆ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.
ಹೀಂಗ್ ಆಗಬಾರದರು:
ಮುಂಡರಗಿ ಹಮ್ಮಗಿ ಬ್ಯಾರೇಜ್ ನೀಂದ ಗದಗ ನಗರಕ್ಕೆ 70 ಕಿಮೀ ದೂರದಿಂದ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಗದಗ ನಗರಕ್ಕೂ ಪ್ರತಿನಿತ್ಯ 36 ಎಂಎಲ್ಡಿ ನೀರು ಪೂರೈಕೆ ಆಗಬೇಕು. ಆದರೆ, ಕಾಮಗಾರಿ ಕಳಪೆಯಿಂದ ಅಲ್ಲಲ್ಲಿ ಪೈಪ್ಲೈನ್ ಒಡೆಯುತ್ತಿದೆ. ನೀರು ಸೋರಿಕೆ ಆಗಿ ಗದಗ ನಗರಕ್ಕೆ ಕೇವಲ 10 ರಿಂದ 12 ಎಂಎಲ್ಟಿ ನೀರು ಮಾತ್ರ ಪೂರೈಕೆ ಆಗುತ್ತಿದೆ. ನೀರನ ಭವಣೆ ಇನ್ನೂ ತಪ್ಪಿಲ್ಲ. ಈ ಯೋಜನೆ ವಿಲವಾಗಿದೆ. ಈ ಯೋಜನೆಯಂತೆ ಹಾವೇರಿಗೆ ನೀರು ಪೂರೈಸುವ ಯೋಜನೆ ಆಗಬಾರದು ಎಂಬುದು ಸ್ಥಳಿಯರ ಅಭಿಪ್ರಾಯ