ಬಸವರಾಜ ಗುರಿಕಾರ ಒತ್ತಾಯ; ಹಳೆಯ ಪಿಂಚಣಿ ಯೋಜನೆ ಜಾರಿ ಮಸೂದೆ ಮಂಡಿಸಿ

6 Dwd 6
Published on

ಧಾರವಾಡ: ಲೋಕಸಭೆಯ ವಿಶೇಷ ಅಽವೇಶನ ಸೆ. ೧೮ರಿಂದ ನಡೆಯಲಿದೆ. ಇದೇ ಸಂದರ್ಭದಲ್ಲಿ ಹೊಸ ಪಿಂಚಣಿ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಬೇಕು ಎಂದು ಎಐಪಿಟಿಎಫ್ ರಾಷ್ಟಿçÃಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದರು.
ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ಕೇರಳದ ಎರ್ನಾಕುಲಂನಲ್ಲಿ ಬುಧವಾರ ಜರುಗಿದ ಭಾರತ ಯಾತ್ರೆಯ ಸಮಾವೇಶ ಸಭೆಯಲ್ಲಿ ಅವರು ಮಾತನಾಡಿದರು.
ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸುವ ಬಗ್ಗೆ ಹಲವಾರು ರಾಜ್ಯ ಸರ್ಕಾರಗಳು ನಿರ್ಣಯ ಕೈಗೊಂಡಿವೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದರೆ ಮಾತ್ರ ಶಿಕ್ಷಕರು ನೆಮ್ಮದಿಯ ಜೀವನ ಹಾಗೂ ಸಮಾಧಾನದಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇಡೀ ಸರ್ಕಾರಿ ನೌಕರ ಸಮುದಾಯ ಕಷ್ಟದಲ್ಲಿ ಜೀವನ ಕಳೆಯುವಂತಾಗುತ್ತದೆ ಎಂದರು.
ಫೆಡರೇಶನ್ ಖಜಾಂಚಿ ಹರಿಗೋವಿಂದನ್, ಉಪ ಪ್ರಧಾನ ಕಾರ್ಯದರ್ಶಿ ರಂಗರಾಜನ್ ಪದಾಽಕಾರಿಗಳಾದ ಸೀಮಾ ಮಾಥುರ್, ರಮಾದೇವಿ ನಾಗರಾಜ, ಅಬ್ದುಲ್ ಮಜೀದ, ಅರವಿಂದನ ಕೊಲ್ಲಂ, ಪರರೂಸ್ ಸಜೀಬ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net