ಮುಂಡರಗಿ ಕೀರ್ತಿ ಹೆಚ್ಚಿಸಿದ ವಿಜ್ಞಾನಿ ಬಸವರಾಜ

14MDG3 SANMANA
Published on

ಮುಂಡರಗಿ: ಬಡತನದಲ್ಲಿ ಪರಿಶ್ರಮದಿಂದ ಶಿಕ್ಷಣ ಪಡೆದು ಇಸ್ರೋ ಸಂಸ್ಥೆಯ ವಿಜ್ಞಾನಿಯಾಗಿ ಚಂದ್ರಯಾನ-3ರ ಯಶಸ್ಸಿಗಾಗಿ ಕಾರ್ಯನಿರ್ವಹಿಸಿ ಮುಂಡರಗಿಯ ಕೀರ್ತಿ ಹೆಚ್ಚಿಸಿದ ಬಸವರಾಜ ಕಲ್ಲಕುಟಗರ ಮುಂದಿನ ಜೀವನದಲ್ಲಿಯೂ ಇಂತಹ ಸಾಧನೆಗಳನ್ನು ಮಾಡುತ್ತಿರಲಿ ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಸಭಾಭವನದಲ್ಲಿ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜು, ಜ.ಅ.ಪ್ರೌಢಶಾಲೆ, ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆ, ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಪದವಿ ಪೂರ್ವ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಂದ್ರಯಾನ-3 ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿಜ್ಞಾನಿ ಬಸವರಾಜ ಕಲ್ಲಕುಟಗರ ಮಾತನಾಡಿ, ನನ್ನ ಈ ಸಾಧನೆ ಶ್ರೇಯಸ್ಸು ಸಂಪೂರ್ಣ ನನ್ನ ತಾಯಿಗೆ ಸಲ್ಲುತ್ತದೆ. ಇಂತಹ ತಾಯಿ ಜೀವನದಲ್ಲಿ ಇದ್ದರೆ ಏನೆಲ್ಲ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇಸ್ರೋ ವಿಜ್ಞಾನಿ ಬಸವರಾಜ ಕಲ್ಲಕುಟಗರ ಹಾಗೂ ರಾಜ್ಯ ಅತ್ಯುತ್ತಮ ಸಾಧಕ ಪ್ರಶಸ್ತಿ ಪುರಷ್ಕೃತ ಕರಬಸಪ್ಪ ಹಂಚಿನಾಳ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್. ಡಂಬಳ ಪ್ರೌಢಶಾಲೆಯ ಮೇಲ್ವಿಚರಣಾ ಸಮಿತಿ ಅಧ್ಯಕ್ಷ ಎಂ.ಎಸ್. ಶಿವಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.
ಗೀತಮ್ಮ ಕಲ್ಲಕುಟಗರ, ಆರ್.ಆರ್. ಹೆಗ್ಗಡಾಳ, ಪ್ರಾಚಾರ್ಯ ಎಸ್. ಶಿವರಾಜಸ್ವಾಮಿ, ಮುಖ್ಯಶಿಕ್ಷಕರಾದ ಎಸ್.ಸಿ. ಚಕ್ಕಡಿಮಠ, ಎಂ.ಎ. ಜಾತಗೇರ, ಪ್ರಾಚಾರ್ಯ ಐ.ಎನ್.ಪೂಜಾರ, ಎಸ್.ಬಿ. ಹಿರೇಮಠ, ಪ್ರಾಚಾರ್ಯ ಡಿ.ಸಿ. ಮಠ, ಡಾ.ಅನ್ನದಾನಿ ಮೇಟಿ, ವೀರನಗೌಡ ಗುಡದಪ್ಪನವರ, ಬಸವರಾಜ ಬನ್ನಿಕೊಪ್ಪ ಇದ್ದರು.

ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ರಿತ್ತಿ ಪುರಷ್ಕೃತರ ಪರಿಚಯ ಮಾಡಿದರು. ಸಣ್ಣಪರಮೇಶ್ವರಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net