ಗ್ರಾಮೀಣ ಯುವ ಜನ ಮಾದರಿ

19-SVR-1
Published on

ವಿಜಯವಾಣಿ ಸುದ್ದಿಜಾಲ ಸವಣೂರ

ಗ್ರಾಮೀಣ ಪ್ರದೇಶದ ಯುವ ಜನ ರಕ್ತದಾನ ಮಹತ್ವ ಅರಿತು ಶಿಬಿರ ಏರ್ಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಬಿಜೆಪಿ ಹತ್ತಿಮತ್ತೂರ ಮಂಡಳ, ಕಡಕೋಳ, ವಿವಿಧ ಗ್ರಾಮಗಳ ಯುವ ಸಮೂಹ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ತಾಲೂಕಿನ ಕಡಕೋಳ ಗ್ರಾಮದದಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಡಕೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಜಗದೀಶ ಕರೆಪ್ಪಗೋಳ ಮಾತನಾಡಿ, ಸೆ. 17 ರಿಂದ ಅ. 2 ರವರೆಗೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಗ್ರಾಮಮಟ್ಟದಲ್ಲಿ ಈ ಸೇವೆ ನೀಡಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಕಮಲವ್ವ ಹುಲಗೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೇಣವ್ವ ತಳವಾರ, ಸದಸ್ಯರಾದ ಕಲ್ಲಪ್ಪ ಗುಂಜಳ, ಬಸಮ್ಮ ತಿಮ್ಮಯ್ಯನವರ, ನೀಲವ್ವ ಕಮ್ಮಾರ, ಈರಮ್ಮ ಜೇಕಿನಕಟ್ಟಿ, ಸುರೇಶ ಗುಜ್ಜರಿ, ಚಿಕ್ಕಪ್ಪ ಹಡಪದ, ಪ್ರಮುಖರಾದ ಗವಿಸಿದ್ದಪ್ಪ ದ್ಯಾವಣ್ಣನವರ, ತಿಪ್ಪಣ್ಣ ಸುಬ್ಬಣ್ಣನವರ, ಶಂಬಣ್ಣ ಗುಂಜಳ, ನಾಗರಾಜ ಗುಜ್ಜರ, ರಾಜಶೇಖರ ಬಳ್ಳಾರಿ, ಮಾರುತಿ ಕಲ್ಯಾಣಿ, ಚಂದ್ರಣ್ಣ ಸಂಕದಾಳ, ರಮೇಶ ಮುಗದೂರ, ಜಗದೀಶ ಕರಿಯಪ್ಪಗೌಡ್ರ, ಶರಣಪ್ಪ ಕಲ್ಲಮ್ಮನವರ, ಎಂ.ವೈ. ಪಟೇಲ, ಮೃತ್ಯುಂಜಯ ಮುಷ್ಠಿ, ಈರಣ್ಣ ಅಂಗಡಿ, ಹನುಮಂತ ಅಮರಾಪುರ, ಸತೀಶ ಗೌಳಿ, ಮಲ್ಲಿಕಾರ್ಜುನ ಅಕ್ಕೂರ, ಶರಣಪ್ಪ ಪರಮ್ಮನವರ, ಮಹಾಂತೇಶ ಹೊಳೆಮ್ಮನವರ, ಪ್ರವೀಣ ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net