

ಮುನವಳ್ಳಿ: ಪತ್ರಕರ್ತ ಬಸವರಾಜ ತುಳಜಣ್ಣವರ ಕರ್ತವ್ಯ ಪ್ರಜ್ಞೆ ಹಾಗೂ ಸೇವೆ ಮಾದರಿ ಎಂದು ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಹೇಳಿದರು. ಪಟ್ಟಣದ ಶಂಕರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಪತ್ರಕರ್ತ, ಛಾಯಾಗ್ರಾಹಕ ಬಸವರಾಜ ತುಳಜಣ್ಣವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಹಕಾರಿ ಧುರೀಣರಾದ ರವೀಂದ್ರ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ಉಮೇಶ ಬಾಳಿ, ಸಿ.ಬಿ.ಬಾಳಿ, ಸುರೇಶ ಜಾವೂರ, ಸುಭಾಸ ಗೀದಿಗೌಡ್ರ, ಎಂ.ಎಸ್. ಸರ್ವಿ, ಮಲ್ಲಣ್ಣ ಹನಸಿ, ಎಂ.ಆರ್.ಗೋಪಶೆಟ್ಟಿ, ಸೋಮಶೇಖರ ಯಲಿಗಾರ, ಅಂಬರೀಷ ಯಲಿಗಾರ, ಚಂದ್ರು ಜಂಬ್ರಿ, ಕೇಶವ ಭಂಡಾರಿ, ಟಿ.ಎನ್.ಮುರಂಕರ, ರಾಧಾ ಕುಲಕರ್ಣಿ, ಶಾಂತಲಾ ತುಳಜಣ್ಣವರ, ನಂದಿತಾ ತುಳಜಣ್ಣವರ, ಸಂಜು ತುಳಜಣ್ಣವರ, ಪ್ರಶಾಂತ ತುಳಜಣ್ಣವರ, ಮಹಾಂತೇಶ ಶೆಟ್ಟರ ಇದ್ದರು.