ಸರ್ಕಾರ-ಜನರಿಗೆ ಸ್ವಯಂ ಸೇವಾ ಸಂಸ್ಥೆಗಳು ಸೇತುವೆ

Basavaraja Sankagonda, Civic Monitoring Committee, Congress, Govt., Voluntary Organizations, Thikota,
ತಿಕೋಟಾ ಪಟ್ಟಣದಲ್ಲಿ ತಾಲೂಕಿನ 6 ಗ್ರಾಮ ಪಂಚಾಯಿತಿಗಳಲ್ಲಿ ರಚನೆಯಾದ ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಾಲೂಕುಮಟ್ಟದ ಸಮಾವೇಶದಲ್ಲಿ ವಿಶಾಲಾ ಸಂಸ್ಥೆಯ ನಿರ್ದೇಶಕಿ ಸರೋಜಾ ಕಮಲಾಪುರ ಮಾತನಾಡಿದರು. ಬಸವರಾಜ ಸಂಕಗೊಂಡ, ವಿಜಯಾ ಗಲಗಲಿ, ಕಲ್ಲಪ್ಪ ನಮದರಗಿ, ರಮೆಶ ಭಜಂತ್ರಿ ಇತರರಿದ್ದರು.
Published on

ತಿಕೋಟಾ: ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಸ್ವಯಂ ಸೇವಾ ಸಂಸೆಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕಗೊಂಡ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‌ದಲ್ಲಿ ಸೋಮವಾರ ವಿಶಾಲಾ ಸ್ವಯಂ ಸೇವಾ ಸಂಸ್ಥೆ, ಅಜೀಂ ಪ್ರೇಮಜಿ ಪ್ರತಿಷ್ಠಾನದ ಸಹಯೋಗದಲ್ಲಿ ತಿಕೋಟಾ ತಾಲೂಕಿನ 6 ಗ್ರಾಮ ಪಂಚಾಯಿತಿಗಳಲ್ಲಿ ರಚನೆಯಾದ ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಾಲೂಕು ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಸದಸ್ಯರು ಇಲ್ಲಿ ಪಡೆದ ಮಾಹಿತಿಯನ್ನು ನಿಮ್ಮ ಗ್ರಾಮದ ಜನರಿಗೂ ತಿಳಿಸಿ ಹೇಳಿ ಅವರಿಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ವಿಶಾಲಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ವಿಶಾಲಾ ಸಂಸ್ಥೆಯ ನಿರ್ದೇಶಕಿ ಸರೋಜಾ ಕಮಲಾಪುರ, ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜನಾಧಿಕಾರಿ ಕಲ್ಲಪ್ಪ ನಂದರಗಿ, ಸಂಸ್ಥೆಯ ಯೋಜನಾ ವ್ಯವಸ್ಥಾಪಕ ರಮೇಶ ಭಜಂತ್ರಿ ಮಾತನಾಡಿದರು. ಸಂಗೀತಾ ಘಾಟಗೆ ವಂದಿಸಿದರು.

ಸಂಪನ್ಮೂಲ ವ್ಯಕ್ತಿ ವಿಜಯಾ ಗಲಗಲಿ, 6 ಗ್ರಾಮ ಪಂಚಾಯಿತಿಗಳ ನಾಗರಿಕ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರು, ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net