

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನೂತನ ಅಧ್ಯರಾಗಿ ಬಸವರಾಜ ಯಲ್ಲಪ್ಪ ಪುಂಡಿ ಅವಿರೋಧ ಆಯ್ಕೆಯಾಗಿದ್ದಾರೆ.
ಕಾರ್ಖಾನೆ ಆವರಣದಲ್ಲಿ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಆಯ್ಕೆ ನಡೆಯಿತು. ರಿಟರ್ನಿಂಗ್ ಅಧಿಕಾರಿಯಾಗಿ ಬೆಳಗಾವಿ ಸಹಕಾರ ಸಂಗಳ ಸಹಾಯಕ ನಿಬಂಧಕ ಜಬಿವುಲ್ಲಾ ಕೆ. ಕಾರ್ಯನಿರ್ವಹಿಸಿದರು.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ನಿರ್ದೇಶಕರಾದ ಲಕ್ಷ$್ಮಣ ಎಮ್ಮಿ, ಶಂಕರಗೌಡ ಪಾಟೀಲ, ಮಂಜುನಾಥ ಪಾಟೀಲ, ಜ್ಯೋತಿಬಾ ಹೆಬತ್ತಿ, ಬಸವರಾಜ ಬೆಂಡಿಗೇರಿ, ಶಿದ್ದಪ್ಪ ದೂರಪ್ಪನವರ, ಅಶೋಕ ಬೆಂಡಿಗೇರಿ, ಭರತೇಶ ಸೇಬಣ್ಣವರ, ಸಂಜೀವ ಹುಬಳೆಪ್ಪನವರ, ಸಾವಂತ ಕಿರಬನವರ, ಮೀನಾ ನೆಲಗಳಿ ಇರರಿದ್ದರು.
ನೂತನ ಅಧ್ಯರನ್ನು ಸನ್ಮಾನಿಸಲಾಯಿತು. ಮೋಹನ ಸಂಬರಗಿ ಅವರ ರಾಜೀನಾಮೆಯಿಂದ ಕಳೆದ ಸಾಲಿನ ಸೆಪ್ಟೆಂಬರ್ನಲ್ಲಿ ಕಾರ್ಖಾನೆ ಅಧ್ಯ ಸ್ಥಾನ ತೆರವಾಗಿತ್ತು. ಈಗ ಆ ಸ್ಥಾನಕ್ಕೆ ಚುನಾವಣೆ ನಡೆಯಿತು.