

ಸಿಂಧನೂರು: ತಾಲೂಕಿನ ಮಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಸವರಾಜ ನಿಟ್ಟೂರು, ಉಪಾಧ್ಯಕ್ಷರಾಗಿ ಕರಿಯಮ್ಮ ಕಲ್ಲೂರು ಗುರುವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.
2024- 25ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಸವರಾಜನಿಟ್ಟೂರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕರಿಯಮ್ಮ ಕಲ್ಲೂರ ಸ್ಪರ್ಧಿಸಿದ್ದರು. ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರಸಲ್ಲಿಸಿದ ಕಾರಣ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಅಮರೇಶ ಹೇಳಿದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಪ್ರಮುಖರಾದ ಪಂಪನಗೌಡ ಮಾಲಿ ಪಾಟೀಲ್, ಬಸವಂತರಾಯ ಕುರಿ, ಬಾಬುಗೌಡ, ಅಂಜಯ ಪಾಟೀಲ್, ದೊಡ್ಡನಗೌಡ ಕಲ್ಲೂರು, ಆದನಗೌಡ ಕಲ್ಲೂರು, ಬಸವರಾಜ ಜೂಲದ, ತಿಮ್ಮನಗೌಡ, ವೀರಭದ್ರಪ್ಪ ಭಂಡಾರಿ, ವೆಂಕನಗೌಡ ಭೂತಲದಿನ್ನಿ, ಗಪೂರ್‌ಸಾಬ, ತಿಮ್ಮನಗೌಡ, ಅಮರೇಗೌಡ ಇತರರಿದ್ದರು.